ಜೀವರಾಶಿಯ ಎದೆಯಲ್ಲಿ ಕದಡಿ ಹೋಗಿಹ ಸಾವಿರ ಭಾವಗಳಿಗೆ ರೂಪ ಕೊಡಲು.
ಬೇಕಾಗಿದ್ದಾರೆ ಕವಿಗಳು.

ತೆರೆಮರೆಯಲ್ಲಿ ಅಳಿದುಹೋದ ಶ್ರೀಸಾಮಾನ್ಯರ ಬದುಕ ಜಗಕ್ಕೆ ತೆರೆದಿಡಲು,
ಬೇಕಾಗಿದ್ದಾರೆ ಕವಿಗಳು.

ರವಿಕಾಣದ ಜಗದ.ಸೌಂದರ್ಯ ರಸಸ್ವಾಧನೆಗೆ ಬೇಕಾಗಿದ್ದಾರೆ ಕವಿಗಳು.

ಎಲ್ಲರೆದೆಯಲ್ಲಿ ಅಡಗಿ ಕುಳಿತ ಕಥೆಗಳ ಹೆಕ್ಕಿ ಕೊಡಲು ಬೇಕಾಗಿದ್ದಾರೆ ಕವಿಗಳು.