ನನಸಾಗಿ ನೀಲಾಕಾಶದಲಿ.
ಹಕ್ಕಿಯಂದದಿ,ಸ್ವಚಂದದಲಿ,
ಮಾನವನ ಕನಸೊಂದು ಹಾರುತಿದೆ ನೋಡಲಿ.

ನನಸಾಗಿ ಸಪ್ತಸಾಗರದಿ.
ಜಲಚರಗಳ ಅಣಕಿಸುತ್ತಾ,ಆವೇಗದಲ್ಲಿ,
ಮಾನವನ ಕನಸೊಂದು ತೇಲುತಿದೆ ನೋಡಲಿ.

ಅಂತರಿಕ್ಷದಲ್ಲಿ,ಸಾಗರದಡಿಯಲಿ,ಅನ್ಯಗ್ರಹದಂಗಳದಲ್ಲಿ.ನನಸಾಗಿ ನಿಮಿಷದಲಿ.
ಮಾನವನ ಕನಸೊಂದು ಪಸರಿಸುತಿದೆ ನೋಡಲಿ.