ಕೈಯಲ್ಲಿ ಕೈ ಹಿಡಿದು ನನ್ನೊಡನೆ ನೀನಿರಲು
ನಿನ್ನ ಶಿರವ ನನ್ನ ಭುಜದ ಮೇಲೆ ಆನಿಸಿರಲು
ನಿನ್ನ ಬೆಚ್ಚನೆಯ ಶ್ವಾಸ ನನಗೆ ತಗುಲಿತರಲು
ವರ್ಣಿಸಲಾರೆ ನಾ ಈ ಮಧುರಾನುಭೂತಿಯ
ನಿನ್ನ ಕಣ್ಣ ಕನ್ನಡಿಯೊಳಗೆ ಕಂಡೆ ನನ್ನ ಪ್ರತಿಬಿಂಬವ
ನೀ ಮುಡಿದ ಮಲ್ಲಿಗೆಯ ಕಂಪು ಸುತ್ತ ಪಸರಿಸಲು
ತಣ್ಣನೆಯ ಗಾಳಿಯಲಿ ಆ ಕಂಪು ಬೆರೆತು
ಸ್ವರ್ಗವೇ ಧರೆಗಿಳಿದಂತಾಯಿತು ಗೆಳತಿ....
ಆಗಸದಿ ಚಂದ್ರಮನು ಅಂಜುತಿಹನು ಹೊರಬರಲು
ನಿನ್ನಂದಕೆ ಎಲ್ಲಿ ಸೋಲುವನೋ ಎಂಬ ಭಯದಿ..
ತಾರೆಗಳು ನಡೆಸಿಹುದು ಪೈಪೋಟಿಯ
ನಿನ್ನ ಮುಡಿಗೆ ಹೂವಾಗಿ ಬಂದು ಸೇರಲು ಗೆಳತಿ
ಪ್ರತಿಕ್ರಿಯೆ (5)