ಲ್ಯಾಪ್ಟಾಪಿನಲ್ಲಿಹಾಕಿದಎದುರಿಗೆಕಂಡಮಲೆನಾಡಿನಚಿತ್ರವನ್ನುನೋಡುತ್ತಾಹಾಗೆಯೇಹಿಂದೆಕುರ್ಚಿಗೆಒರಗಿಕಾಫಿಯನ್ನು ಹೀರುತ್ತಾ, ತನ್ನಊರು, ಮಲೆನಾಡಿನಸುಂದರ ಪರಿಸರ, ಅಲ್ಲಲ್ಲಿ ಒಂದೊಂದು ಮನೆ, ಸುತ್ತಲೂ ಕಾಡು, ಮನೆಯ ಪಕ್ಕ ಹರಿಯುವ ಸಣ್ಣ ಹೊಳೆ, ಅಲ್ಲೆಲ್ಲೋ ಹಕ್ಕಿಗಳ ಸದ್ದು, ತನ್ನ ಪುಟ್ಟ ಪುಟ್ಟ ಹೆಜ್ಜೆಗಳನ್ನು ಮನೆಯ ಹೊರಗಡೆ ಚಾಚಿ ಅಂಗಳಕ್ಕೆ ಬಂದಾಗ ಅಜ್ಜಿ ಕೂಗಿದರೂ ಕೇಳದೆ ಎದುರಿಗೆ ಬಂದ ಆ ಪುಟ್ಟ ಕರುವನ್ನು ತನ್ನ ಎಳೆಯ ಕೈಗಳಿಂದ ಮುಟ್ಟುವ ಬಯಕೆ, ತನ್ನ ಗೆಳೆಯರೊಡಗೂಡಿ ಆಡಿದ ಗೋಲಿ ಬುಗುರಿ ಲಗೋರಿ ಮರಕೋತಿಯಾಟಗಳು, ಹೊಳೆಗೆ ಹೋಗಿ ಗಾಣ ಹಾಕಿ ಹಿಡಿದ ಮೀನುಗಳು, ಕಾಡಿಗೆ ನುಗ್ಗಿ ಚಾಟಿಬಿಲ್ಲಿನಿಂದ ಹೊಡೆದ ಹಕ್ಕಿ, ಹಕ್ಕಿ ಬಿದ್ದಾಗ ಸಂಭ್ರಮಿಸಿದ ಕ್ಷಣ, ಅಮ್ಮನಿಗೆ ಹೋಗಿ ತೋರಿಸಿದಾಗ ಪಾಪದ ಹಕ್ಕಿಯನ್ನು ಹೊಡೆದದ್ದಕ್ಕೆ ಬೈಸಿಕೊಂಡು ತಾನು ಊಟ ಮಾಡುವುದಿಲ್ಲ ಎಂದು ಸಿಟ್ಟು ಮಾಡಿಕೊಂಡು ಹೋದದ್ದು, ಬೇರೆಯವರತೋಟದಲ್ಲಿಹಲಸಿನಹಣ್ಣುಕದಿಯಲುಹೋಗಿಮರದಿಂದಕೆಳಗಿಳಿಸಿಇನ್ನೇನುತಿನ್ನಬೇಕೆನ್ನುವಷ್ಟರಲ್ಲಿಆತೋಟದಯಜಮಾನಬಂದಿದ್ದು, ಅವರಿಂದಸಿಕ್ಕಾಪಟ್ಟೆಬೈಸಿಕೊಂಡಿದ್ದುಆಮೇಲೆಅವರೂ ಒಟ್ಟಿಗೆ ತಿಂದದ್ದು,ಶಾಲೆಗೆಹೋಗೋದಕ್ಕೆತಪ್ಪಿಸಿಕೊಳ್ಳಬೇಕುಎಂದುಕೊಂಡುಅಮ್ಮನಿಗೆಹೋಗೋದಾರಿಯಲ್ಲಿರೋಒಬ್ಬರಮನೆಯಲ್ಲಿನಾಯಿಇದೆಎಂದುಸುಳ್ಳುಹೇಳಿದರೂಅಮ್ಮಕೇಳದೆಅವಳೊಟ್ಟಿಗೆಕರೆದುಕೊಂಡುಹೋಗಿಅದ್ಯಾವನಾಯಿತೋರಿಸುಅಂತಕೇಳಿಅಲ್ಲಿಲ್ಲದ್ದುಗೊತ್ತಾಗಿಸುಳ್ಳುಹೇಳಿದ್ದಕ್ಕೆಶಾಲೆಯವರೆಗೆಕೋಲಿನಲ್ಲಿಹೊಡೆದುಕೊಂಡುಹೋಗಿದ್ದು, ಅಮ್ಮಮನೆಗೆಬರುವಮೊದಲೇಮನೆಗೆಬಂದಿದ್ದು, ಶಾಲೆಯಲ್ಲಿಇಂಜೆಕ್ಷನ್ಕೊಡ್ತಾರೆಅಂತತಿಳಿದತಕ್ಷಣಅಲ್ಲಿಂದಓಡಿಹೋಗಿದ್ದು, ಮಳೆಬರುವಾಗಕೊಡೆಹಾರಿಹೋಗುತ್ತಿದ್ದಕಾರಣಅದನ್ನುಮಡಿಸಿಮಳೆಯಲ್ಲೇನೆನೆದುಕೊಂಡುಮನೆಗೆಬಂದದ್ದು, ಶಿವರಾತ್ರಿಯಪ್ರಸಾದತೆಗೆದುಕೊಂಡುಬರುವಾಗದಾರಿಯಲ್ಲಿ ಮನೆಯದನಎಲ್ಲೋಓಡಿಹೋಗುತ್ತಿದ್ದದ್ದನ್ನುನೋಡಿಪ್ರಸಾದವನ್ನು  ಮನೆಯಕೆಲಸಕ್ಕಬರುವಹೆಂಗಸೊಬ್ಬಳಿಗೆ (ದಲಿತಮಹಿಳೆ) ಕೊಟ್ಟದ್ದನ್ನುನೋಡಿದದೊಡ್ಡಮ್ಮನಿಂದಹಿಗ್ಗಾಮುಗ್ಗಾಬೈಗುಳ, ಮಳೆಗಾಲದಲ್ಲಿ ನೇಗಿಲು ಹಿಡಿದುಕೊಂಡು ಬೇಸಾಯ ಮಾಡಲು ಹೋಗಿ ಗದ್ದೆಯಲ್ಲಿ ಬಿದ್ದು ಮೈಯೆಲ್ಲಾ ಗೊಚ್ಚೆ, ಬೇಸಾಯ ಮುಗಿದ ಮೇಲೆ ಅಲ್ಲೇ ಮರದ ಕೆಳಗೆ ಗೋಣಿ ಚೀಲವನ್ನು ಮೈಮೇಲೆ ಹೊದ್ದುಕೊಂಡು ಅವುಚಿ ಕುಳಿತು ತಿಂದ ಬೆಚ್ಚನೆಯ ರೊಟ್ಟಿ, ಆ ಚಳಿಯಲ್ಲಿ ಕುಡಿದ ಬಿಸಿ ಬಿಸಿ ಬೆಲ್ಲದ ಕಾಫಿ, ತನ್ನ ಕಾಯಕ ಮುಗಿಸಿ ಮೇಯಲು ಹೊರಟ ಎತ್ತುಗಳು, ಕಾಫಿ ಕುಡಿದು ದನ ಕಾಯಲು ಹೊರಟ ಇವನು, ದೂರದಲ್ಲಿ ಗೋಲಿ ಆಡುತ್ತಿದ್ದವರನ್ನು ಕಂಡು ತಾನು ಸೇರಿ, ಇತ್ತ ಹೊಟ್ಟೆ ತುಂಬಿದ ಎತ್ತುಗಳು ಕಾಡಿಗೆ ಓಟ, ನೋಡಿದ ಇವನು ಒಂದೇ ಸಮನೆ ಕಾಡಿಗೆ ನುಗ್ಗಿ ವಾಪಸು ಕರೆತಂದ ಎತ್ತುಗಳು, ಇಲ್ಲದಿದ್ದರೆ ನಾಳಿನ ಬೇಸಾಯಕ್ಕೆ ರಜೆ, ಮಳೆಗಾಲ ಮುಗಿದು ಬೇಸಗೆ ಕಾಲಿಡುವ ಹೊತ್ತಿಗೆ ಎಲ್ಲೆಲ್ಲೂ ಭತ್ತದ ತೆನೆಗಳು , ಆಳುಗಳೊಡನೆ ತಾನೂ ಕುಡುಗೋಲು ಹಿಡಿದು ಕೊಯ್ದ ತೆನೆ, ಅಂಗಳಕ್ಕೆ ಹರಡಿದ ಭತ್ತದ ರಾಶಿ, ಒಕ್ಕಲಾಟಕ್ಕೆ ಎತ್ತುಗಳನ್ನು ತಂದು ಭತ್ತದ ರಾಶಿಯ ಮೇಲೆ ಸುತ್ತಿಸಿ ತನ್ನ ಓರಗೆಯವರೊಂದಿಗೆ ತಾನು ಪಲ್ಟಿ ಹೊಡೆದು ಸಂಭ್ರಮಿಸಿದ ಪರಿ, ಬೇಸಗೆ ರಜೆ ಮುಗಿದು ಶಾಲೆಗೆ ಹೋಗುವ ದುಃಖ, ಹೊಸ ತರಗತಿಗೆ ಹೋಗುವ ಸಂಭ್ರಮ, ಶಾಲೆಮುಗಿದುನಡೆದುಕೊಂಡುಹೋಗುತ್ತಿರುವಾಗಪೇಟೆಯಿಂದಬಂದಬಸ್ಸನ್ನೇನೋಡುತ್ತಾನಿಂತದ್ದು, ತನ್ನಅಜ್ಜಅದರಿಂದಇಳಿದಾಗಆದಸಂತೋಷ, ಅಜ್ಜ ತಂದುಕೊಟ್ಟ ವಿವಿಧ ಚಿತ್ರದ ಬಿಸ್ಕತ್ಗಳು, ಅಲ್ಲೇ ಎಲ್ಲರಿಗೂ ಹಂಚಿ ತಾನು ತಿಂದದ್ದು,  ಏನೋ ಮಗಾ ಮನೆಗೆ ಹೋಗಲ್ವ ಅಂತ ಪಕ್ಕದವನು ಅಂದಾಗ ಎಚ್ಚರವಾಗಿ ತನ್ನ ಲ್ಯಾಪ್ಟಾಪನ್ನು ಮಡಿಸಿ ಬ್ಯಾಗಿಗೆ ಹಾಕಿ ಕಾರಿನಲ್ಲಿ ಕುಳಿತು ಪ್ರತಿದಿನ ಹೀಗೆ ನಡೆಯುವ ಜೀವನ, ಎಂದೂ ನಿಲ್ಲದ ಟ್ರಾಫಿಕ್ ಎಂಬ ಮಹಾ ಸಾಗರದಲ್ಲಿ ಲೀನವಾದನು.

 

 

ಜೀವನವೆಂದರೆ ಅಲ್ಪವಿರಾಮಗಳ ಸಂತೆ, ಕೊನೆಗೊಂದು ಪೂರ್ಣವಿರಾಮ - ೧

http://sampada.net/%E0%B2%9C%E0%B3%80%E0%B2%B5%E0%B2%A8%E0%B2%B5%E0%B3%86%E0%B2%82%E0%B2%A6%E0%B2%B0%E0%B3%86-%E0%B2%85%E0%B2%B2%E0%B3%8D%E0%B2%AA%E0%B2%B5%E0%B2%BF%E0%B2%B0%E0%B2%BE%E0%B2%AE%E0%B2%97%E0%B2%B3-%E0%B2%B8%E0%B2%82%E0%B2%A4%E0%B3%86-%E0%B2%95%E0%B3%8A%E0%B2%A8%E0%B3%86%E0%B2%97%E0%B3%8A%E0%B2%82%E0%B2%A6%E0%B3%81-%E0%B2%AA%E0%B3%82%E0%B2%B0%E0%B3%8D%E0%B2%A3%E0%B2%B5%E0%B2%BF%E0%B2%B0%E0%B2%BE%E0%B2%AE-%E0%B3%A7