ನಿಮಗೆಲ್ಲರಿಗೂ ಹಳೆಯ ಕಥೆ ತಿಳಿದಿರಬಹುದು ಹಾಗಾಗಿ ಅದನ್ನ ಇಲ್ಲಿ ಹೇಳಲು ಹೋಗುವುದಿಲ್ಲ, ಈ ಕಥೆ ಓದಿದ ಬಳಿಕ ಅದು ನೆನಪಿಗೆ ಬರಬಹುದು, ಬಾರದಿದ್ದರೂ ಪರವಾಗಿಲ್ಲ ಇದನ್ನ ಓದಿ.
ಅವನು ವೀಕೆಂಡ್ ಎಂದು ಶುಕ್ರವಾರವೇ ಊರಿಗೆ ಹೋಗೋಣವೆಂದು ನಿರ್ಧರಿಸಿದ್ದನು, ರಾತ್ರಿ ವೋಲ್ವೋ ಬಸ್ಸಿಗೆ ಹೋದರಾಯಿತೆಂದುಕೊಂಡು ರಿಸರ್ವೇಶನ್ ಮಾಡಿಸಲು ಕೌಂಟರಿಗೆ ಹೋದನು. ಅಲ್ಲಿ ಸ್ವಲ್ಪ ರಶ್ ಇತ್ತು, ಹಾಗೆ ಕ್ಯೂನಲ್ಲಿ ನಿಂತವನಿಗೆ ವೋಲ್ವೋ ಬಸ್ಸಿಗೆ ೪೫೦ ರೂ ಕೊಡುವುದರ ಬದಲು ರಾಜಹಂಸಕ್ಕೆ ೩೩೦ ಕೊಟ್ಟು ಹೋದರೆ ಸ್ವಲ್ಪ ದುಡ್ಡು ಉಳಿಸಬಹುದೆಂದುಕೊಂಡನು, ಕ್ಯೂ ಮುಂದೆ ಸಾಗುತ್ತಿತ್ತು. ಕೊನೆಗೆ ಬುಕ್ ಮಾಡಲು ಅವನ ಸರತಿ ಬಂತು, ಮತ್ತೇನೋ ಧಿಡೀರನೆ ಹೊಳೆದು ಟಿಕೆಟ್ ಬುಕ್ ಮಾಡಿಸದೆ ಹೊರಗೆ ಬಂದನು. ನಾಳೆ ಮಧ್ಯಾಹ್ನ ಇಂಟರ್ಸಿಟಿಗೆ ಹೋದರೆ ಕೇವಲ ೧೫೦ ರೂನಲ್ಲಿ ಹೋಗಬಹುದು ಎಂದು ನಿರ್ಧಾರ ಮಾಡಿ ಮನೆಗೆ ಹೋದನು. ಮಾರನೇ ದಿನ ಮಧ್ಯಾಹ್ನ ಬಂತು, ಇಂಟರ್ಸಿಟಿಗೆ ೧೫೦ ಕೊಡುವುದರ ಬದಲು ಭಾನುವಾರ ಬೆಳಗ್ಗೆ ಪ್ಯಾಸೆಂಜರ್ ಗಾಡಿಯಲ್ಲಿ ಹೋದರೆ ಕೇವಲ ೪೫ ರೂಪಾಯಿಗಳಲ್ಲಿ ಊರು ತಲುಪಬಹುದೆಂದುಕೊಂಡನು. ಭಾನುವಾರ ಬೆಳಗ್ಗೆ ಪ್ಯಾಸೆಂಜರ್ ಗಾಡಿಗೆ ಹತ್ತಿದನು, ಊರಿಗೆ ತಲುಪುವಾಗ ಸಂಜೆ ೫ ಆಗಿತ್ತು. ೪೫೦ರೂ ಬದಲು ೪೫ ರೂಗೆ ಊರು ತಲುಪಿದ್ದನು ಆದರೆ ಅಲ್ಲಿಗೆ ವೀಕೆಂಡ್ ಮುಗಿದಿತ್ತು!
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಬೆಳಕಾರುವಾ ಮುನ್ನ ಕತ್ತಲಾವರಿಸದಿರಲಿ
ಕುಂಭಕರ್ಣನಾದಾರೂ ಎದ್ದೇಳುತಿದ್ದನೇನೋ
ಬ್ಯಾ-ಸಾಯ - > ಕೆಲವೇ ಗಂಟೆಗಳ ಕಥೆ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (2)