ಹುಡುಕಾಟ.
ಕಾಯಿದೆ ಕಾನೂನು
ಪೊಲೀಸು ನ್ಯಾಯಾಲಯಗಳ
ನಾಗರಿಕ ಸಮಾಜದ
ಸದಸ್ಯ ನಾನಾಗಿ
ತಾಯ ಮಡಿಲಲ್ಲಿ
ಮಲಗಿದ ಕಂದಮ್ಮನ
ಭದ್ರತೆಯ ಬಯಸಿದೆ.
ಮಗು ಕನಸಿನಲ್ಲೇ ನಕ್ಕಿತು.
ಬಂಧು ಬಳಗ ಮನೆ ವಾಹನ
ಸಕಲ ಸೌಲಭ್ಯಗಳ
ಬದುಕ ಸಾಗಿಸುತ್ತಾ
ದೇವರ ಮುಂದೆ
ಹಚ್ಚಿಟ್ಟ ನಂದಾದೀಪದ
ಶಾಂತಿಯ ಬಯಸಿದೆ.
ದೀಪ ಓಲಾಡಿ ನಕ್ಕಿತು.
ಬಣ್ಣದ ಜಾಹೀರಾತು
ಹಸನ್ಮುಖೀ ಮಾಡೆಲುಗಳ
ಥಳುಕು ಬಳುಕಿನ
ಬಲೆಯೊಳಗೇ ಇರುತ್ತ
ಹಸಿರು ಗಿಡದಲ್ಲಿ
ಅರಳಿ ನಗುವ
ಹೂ ಚೆಲುವನರಸಿದೆ.
ಹೂವು ಮುಗುಳ್ನಕ್ಕಿತು.
ಮಗು ದೀಪ ಹೂವು
ನಗುತ್ತಲೇ ಇವೆ.
ನನ್ನ ಹುಡುಕಾಟ
ಸಾಗಿಯೇ ಇದೆ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (2)