ನೀನಿಲ್ಲದೆ ನಾನಿಲ್ಲ, ನೀನಿಲ್ಲದೆ ಅವನಿಲ್ಲ
ನೀನಿಲ್ಲದೆ ಏನಿಲ್ಲ ನೀನಿಲ್ಲದೆ ಜಗವಿಲ್ಲ
ನಿನಗುಂಟೆ ಅಡೆ ತಡೆ ನಿನಗುಂಟೆ ಪರಿಮಿತಿ
ನೀನಿಲ್ಲದೆ ಭೂಮಿಯು ತಲುಪುವುದು ಅಧೋಗತಿ.
ಬಣ್ಣವಿಲ್ಲ ನಿನಗೆ..ರೂಪವಿಲ್ಲ ನಿನಗೆ
ಆಕಾರವಿಲ್ಲ ನಿನಗೆ ರುಚಿಯಿಲ್ಲ ನಿನಗೆ
ಆದರೂ ನೀನಿಲ್ಲದೆ ಜೀವವಿಲ್ಲ,ಜೀವನವಿಲ್ಲ..
ನೀನಿಲ್ಲದೆ ಏನಿಲ್ಲ ನೀನಿಲ್ಲದೆ ಜಗವಿಲ್ಲ
ಪ್ರಕೃತಿಯ ವರದಾನ ನೀನಾಗಿ ಇರುವೆ
ನಿಸ್ವಾರ್ಥ ಸೇವೆಯ ನೀ ನೀಡುತಿರುವೆ
ಕಲುಷಿತಗೊಳಿಸುತಿಹರು ಮಾನವರು ನಿನ್ನನು
ಅರಿಯದೆ ನಿನ್ನ ಮಹತ್ವವ ಅವರ ಭವಿತವ್ಯವ
ಪ್ರತಿಕ್ರಿಯೆ (1)