ಉದಯಿಸುತಿಹನು ರವಿಯು ಹೊಸ ಸಂವತ್ಸರದಿ
ಹೆಂಗಳೆಯರು ಬಿಡಿಸುತಿಹರು ರಂಗೋಲಿಯ ಸಡಗರದಿ
ಹಸಿರು ತೋರಣವ ಬಾಗಿಲಿಗೆ ಕಟ್ಟುತ ಆನಂದದಿ
ಸ್ವಾಗತಿಸುವ ಹೊಸವರ್ಷವ ಸಂಭ್ರಮದ ಉಗಾದಿ..
ವಿದಾಯ ಹೇಳೋಣ ವಿಕೃತಿನಾಮ ಸಂವತ್ಸರಕೆ
ಸ್ವಾಗತ ಕೋರೋಣ ಶ್ರೀ ಖರನಾಮ ಸಂವತ್ಸರಕೆ
ಪಂಚಾಗ ಶ್ರವಣವ ಮಾಡಿ ಬೇಡೋಣ ದೇವರನು
ಹರಸು ನೀಡು ನೀ ಸುಖ ಶಾಂತಿ ನೆಮ್ಮದಿಯನು.
ಬೇವು ಬೆಲ್ಲವ ತಿಂದು ನಲಿಯೋಣ ಬನ್ನಿ
ಕಷ್ಟ ಸುಖವ ಹಂಚಿ ಬಾಳೋಣ ಬನ್ನಿ..
ಪ್ರೀತಿಯ ಕೂಡೋಣ ದ್ವೇಷವ ಅಳಿಸೋಣ
ಸ್ನೇಹವ ಹಂಚುತ ಬನ್ನಿ ನಲಿಯೋಣ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (11)