ಕರೆದಿದೇ,ಕರೆದಿದೇ ಕಾಡುವ ಕಾಡು.
ಅಡವಿಯ ಒಡಲದು ಅಚ್ಚರಿ ಗೂಡು.

ಅಡಗಿಹ ನಿಗೂಡವ
ನೀ ಹುಡುಕಾಡು.
ನಡುವಲೀ ಹರಿವ ತೊರೆಯನ್ನು ನೋಡು.

ತೊರೆಗಳು ಹಿಡಿದಿವೇ ಕಡಲಿನ ಜಾಡು.
ದೂರದಿ ಕೇಳಿದೇ ಹಕ್ಕಿಯ ಹಾಡು.

ಬೆಟ್ಟದ ತುದಿಯಲ್ಲಿ
ನೀ ನಿಂತು ನೋಡು.
ಹಕ್ಕಿಯ ಜೊತೆಯಲ್ಲಿ ಮನಬಿಚ್ಚಿ ಹಾಡು.