ಮುಚ್ಚಿವೆಯಾದರು ಕಂಗಳು
ಜಾರಿಲ್ಲ ನಿದ್ರೆಗೆ ಮೆದುಳು
ಕೊರೆಯುತಿಹುದು ಚಿಂತೆಯ ಹುಳು
ಮಾಡುತ ಮನದ ಶಾಂತಿ ಹಾಳು.
ಬೇಡವೆಂದು ದಬ್ಬಿದರೂ ಹೊರಗೆ
ಹೋಗದೆ ಕೊರೆಯುವುದೇಕೆ ಒಳಗೆ
ತಳಮಳವೇಕೆ ಒಡಲೊಳಗೆ
ಬಾರದೇಕೆ ನಿದ್ರೆ ಕಂಗಳೊಳಗೆ.
ತುಂಡಾಗುತಿಹುದು ಎಣಿಕೆ
ಅಸಾದ್ಯವಾಗಿಹುದು ಏಕಾಗ್ರತೆ
ಓದು ರುಚಿಸದೇಕೆ
ಹಾಡೂ ಇಂಪೆನಿಸದೇಕೆ.
ಆರುತ್ತಿಲ್ಲ ಮನಸಿನ ಕಾವು
ಹೊರಳಿ ಹೊರಳಿ ಮೈ ಕೈ ನೋವು
ನುಂಗಿದರೂ ನಿದ್ರೆ ಗುಳಿಗೆ
ಬರುತ್ತಿಲ್ಲ ನಿದ್ರೆ ಬಳಿಗೆ.
ಚಿಂತೆಗಳೇ ನಿಮಗೇಕಿಲ್ಲ
ಸ್ವಲ್ಪವೂ ಕರುಣೆ
ಸುಳಿಯದಿರಿ ಹತ್ತಿರ
ತಾಳೆನು ಈ ಬವಣೆ.
ಚಿಂತೆಗಳಿಗೇಕಿಲ್ಲ ಸ್ವಲ್ಪವೂ ಕರುಣೆ
ಪ್ರತಿಕ್ರಿಯೆ (4)