ಬರೆಯುವ ಮೊದಲು ಸತಿಯಾಗಿದ್ದಳು
ಪತಿಗೆ ಅಚ್ಚುಮೆಚ್ಚು.
ನಂತರ ಸತಿಯ ಚುಟುಕು ಕುಟುಕುಗಳಿಂದ
ಪತಿಯಾಗತೊಡಗಿದ ಪೆಚ್ಚು.

ಅಡುಗೆಗೂ ಸಮಯವಿರಲಿಲ್ಲ ಸತಿಗೆ
ಹೆಚ್ಚಾದಂತೆ ಬರೆಯುವ ಹುಚ್ಚು
ಮಾಡಿದರೂ ಆಗುತಿತ್ತು ರುಚಿ ಕಮ್ಮಿ
ಅಥವ ಉಪ್ಪು ಹೆಚ್ಚು.

ಸಾಮಾನ್ಯವಾದಂತೆ ಉಪವಾಸದ ದಿನಗಳು
ಹೆಚ್ಚತೊಡಗಿತು ಪತಿಯ ಉದರದಲಿ ಕಿಚ್ಚು.
ಸಹನೆ ಮೀರಿ ಕೇಳಿದ ಒಂದು ದಿನ
ಯಾರು ನಿನಗೆ ಹೆಚ್ಚು?