ಭೂರಮೆಯ ಹಸಿರು ವೇದಿಕೆಯ ಮೇಲೆ
ಆಗಸದ ಕಲಾವಿದರ ಗಾಯನ ನೋಡಿರಿ
ಗುಡುಗು ಸಿಡಿಲಿನ ಪಕ್ಕವಾದ್ಯವು ಮೊಳಗಲು
ಶುರುವಾಯಿತು ಚಿಟಪಟ ಮಳೆಯ ಗಾಯನವು
ಭೂರಮೆಯು ಗಾಯನದ ತಾಳಕ್ಕೆ ತಣಿಯುತಿಹಳು
ನರ್ತಿಸುತಿಹವು ಸಂಭ್ರಮದಿ ತರುಲತೆಗಳು
ನೆಲದೊಡಲಿನಿಂದ ತಲೆಯೆತ್ತಿ ಗಾಯನವ
ಕೇಳಲು ಹಾತೊರೆಯುತ್ತಿರುವ ಮೊಳಕೆಗಳು
ನಾಚಿ ನಾಚಿ ನರ್ತಿಸುತಿಹಳು ನವಿಲೆಂಬ ನಾಟ್ಯರಾಣಿ
ದನಿಗೂಡಿಸುತಿಹವು ಹಕ್ಕಿಗಳು ನಿನ್ನ ಗಾಯನಕೆ
ಏನೆಂದು ಬಣ್ಣಿಸಲಿ ನಾ ನಿನ್ನ ಗಾಯನವ
ಮರುಳಾಗದಿರುವವರ್ಯಾರು ನಿನ್ನ ಗಾಯನಕೆ?
ಚಿತ್ರ ಕೃಪೆ : ಅಂತರ್ಜಾಲ
ಪ್ರತಿಕ್ರಿಯೆ (13)