ನಾ ನಿನ್ನ ಮರೆತರೂ ನೀ ನನ್ನ ಬಿಡಲೊಲ್ಲೆ ಏಕೆ?
ಏಕಿಷ್ಟು ಕೋಪ ದ್ವೇಷ ನನ್ನ ಮೇಲೆ ನಿನಗೆ
ನಾ ಮಾಡಿದ ಅಪರಾಧವಾದರೂ ಏನು
ಬಿಟ್ಟು ಬಿಡು ನನ್ನ, ನನ್ನ ಪಾಡಿಗೆ..
ನಾನೆಷ್ಟು ತೋರಿಸಿದೆ ನಿನ್ನ ಮೇಲೆ ಪ್ರೀತಿ ಆರೈಕೆ
ಆದರೂ ನೀನೇಕೆ ನನ್ನೀ ಪರಿ ಕಾಡುತಿರುವೆ
ತುಂಬಿಕೊಂಡಿರುವೆ ಹುಳುಕ ನಿನ್ನ ತುಂಬಾ
ಹಗಲು ರಾತ್ರಿ ನರಳುತಿರುವೆ ನಾ ನಿನ್ನಿಂದ
ನಿನಗಾಗಿ ನಾ ಮಾಡಿದ ತ್ಯಾಗಗಳೆಷ್ಟು
ನಿನಗಾಗಿ ನಾ ಮಾಡಿದ ವ್ಯಯಗಳೆಷ್ಟು
ಕರುಣೆ ಬಾರದೆ ಇಷ್ಟಾದರೂ ನನ್ನ ಮೇಲೆ
ಬಿಟ್ಟುಬಿಡು ನನ್ನ ಮತ್ತೆ ಬಾರದಿರು ಓ ಹಲ್ಲು ನೋವೆ
ಪ್ರತಿಕ್ರಿಯೆ (5)