ಬರಿ ನೋಟಿಗಾಗಿ !?
ಸಾಗರಗಳ ದಾಟಿ
ಸಹಸ್ರಾರು ಮೈಲುಗ
ಳಾಚೆ ಮನ ಮಾರಿ
ಬದುಕುವ ಬದುಕು
ಬರಿ ನೋಟಿಗಾಗಿ !?
ಜ್ಞಾನ ವಿಜ್ಞಾನ
ಕಲೆ ಸಾಹಿತ್ಯ
ವಿಧ್ಯೆ ವಿನೋದಗಳೆಲ್ಲ
ಬರಿ ನೋಟಿಗಾಗಿ !?
ಗ೦ಡ ಹೆ೦ಡಿರು
ಮಕ್ಕಳುಗಳ ಬೇರು
ಬೇರೆ ಬೇರೆಡೆಯಲ್ಲಿ
ಹ೦ಚಿ ಕೊ೦ಚ
ಕೊ೦ಚವೆ ಸಡಿಲಿ
ಜಗದ ತೇರಿನ
ಗಾಲಿ ಸಡಿಲಗೊ೦ಡಿಹುದಿ೦ದು,
ಬರಿ ನೋಟಿಗಾಗಿ!?
ಮೈಮಾರಿ
ಬದುಕ ಬದುಕು
ವಳ ಪರಿಗಿ೦ತ
ಮತ್ತಾವ ರೀತಿಯಲಿ
ಉತ್ತಮರು ನಾವೆಲ್ಲಾ
ಉತ್ತರವನೀವ
ಸಮಯ ಬ೦ದಿಹುದಿ೦ದು
ಕಲ್ಲಾಗದಿರಿ
ಕದ್ದೊಡದಿರಿ
ಬರಿ ನೋಟಿಗಾಗಿ.
ಪ್ರತಿಕ್ರಿಯೆ (1)