1

 ನೆನಪು ಮತ್ತು ಕನಸುಗಳ

ಕಾಯುವ ಕದನ ಘನ, ಘೋರ‌!

2

ಕತ್ತಲು ಬೆಳಕಿನ ನಿರಂತರ‌

ನಿತ್ಯದ  ಓಟದ ದಿನಗಳ‌ ಕ್ಷಣಗಳ‌

ಲೆಕ್ಕವನಿಕ್ಕಲು ಭುವಿ ಸೋಲುವುದೇ, 

ರವಿ ಮೊಡದೆ ಬೆಳಕಾಗುವುದೇ!

3

ನಿತ್ಯದ  ಗಂಜಿಗೆ  ಬದುಕನು

ಸವೆಸಿದ ಮಾತ್ರಕೆ, ಬದುಕಾಗುವುದೇ

ಸ್ವಾರ್ಥದ ಬದುಕು, ನೆಪವಲ್ಲದೆ ಮತ್ತಿನ್ಯಾವರ್ಥವಿದೆ

ಬೆಳಗನು ಕಾಣದೇ ಭುವಿ ಬದುಕುವುದೇ?