ಬರೆಯುವೆ ನಿನಗಾಗಿ ಪ್ರೇಮಗೀತೆಯೊಂದ ಸಖಿ
ಈ ಹುಣ್ಣಿಮೆಯ ಬೆಳಕಿನಲ್ಲಿ ತಣ್ಣನೆಯ ಗಾಳಿಯಲಿ
ಪೂರ್ಣಚಂದ್ರನಲ್ಲಿ ನಿನ್ನ ಪ್ರತಿಬಿಂಬವ ಕಾಣುತ..
ಜೋಡಿಸುತ ಸುಮಧುರ ಪದಪುಂಜವ ಬರೆಯುವೆ ನಿನಗಾಗಿ...
ಕತ್ತಲಾವರಿಸಿದ್ದ ಹೃದಯಮಂದಿರಕೆ ಬೆಳಕಾಗಿ ನೀ ಬಂದೆ
ಉಲ್ಲಾಸದ ಚೈತನ್ಯವ ತುಂಬಲು ನೀ ಎಲ್ಲಿಂದಲೋ ಬಂದೆ
ನಿನ್ನಾಗಮನದಿಂದ ಕುಣಿಯಿತು ನನ್ನೀ ಮನವು ಹರುಷದಿ
ಬೆಲೆ ಕಟ್ಟಲಾಗದು ನೀ ನೀಡಿದ ಮಧುರಾನುಭೂತಿಗೆ...
ತಣ್ಣನೆಯ ಗಾಳಿ ಹಿತವಾಗಿ ಬೀಸುತಿರಲು..
ಆಗಸದ ಸ್ಪರ್ಶಕೆ ಭೂರಮೆಯು ತೋಯಲು ಸಿದ್ಧವಾಗಿರಲು
ಮೊದಮೊದಲ ಮಳೆಹನಿ ಭೂಮಿಯ ಚುಂಬಿಸಿದಾಗ
ನೀ ನೀಡಿದ ಆ ಚುಂಬನದಿಂದ ಮರೆತೇ ನನ್ನ ನಾ ಗೆಳತಿ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (2)