ಭೋರ್ಗರೆಯುವ ಕಡಲುಂಟೆ
ಜುಳು ಜುಳು ನಾದದ ಝರಿಯ ಮರೆತು,
ದಟ್ಟ ಕಾನನ ಉಂಟೆ
ನಲುಗುವ ಬಳ್ಳಿಯ ಮರೆತು,
ತಂಪು ಗಾಳಿಯುಂಟೆ,
ಹಸಿರೆಲೆಯ ಥಳಕು ಮರೆತು,
ಘರ್ಜಿಸುವ ಸಿಡಿಲುಂಟೆ,
ತೇಲುವ ಮೋಡವ ಮರೆತು,
ಧಗಧಗಿಸುವ ಸೂರ್ಯನುಂಟೆ,
ವಿಶಾಲ ಆಕಾಶ ಮರೆತು,
ಪಂಚ ಭೂತಗಳಿಗೆ ಇರದ ಗರ್ವ
ನಿನಗೇಕೊ, ಓ ಮನುಜ,
ನೀನುಂಟೆ ಕಾರುಣ್ಯದ
ದೈವವ ಮರೆತು
ಪ್ರತಿಕ್ರಿಯೆ (5)