ಪಾರಿವಾಳದ ಕುಟುಂಬ ಯೋಜನೆ!

ಅಂದು ರತಿ ಸುಖದಲಿ ನನ್ನನ್ನೇ ನಾನು ಮರೆತೆ,
ಮೊಟ್ಟೆಗಳು ಈಚೆಗೆ ಬಂದಾಗಲಷ್ಟೇ ನಾ ಅರಿತೆ;
ದೇಶದ ಉದ್ದಗಲಕ್ಕೂ ಇಂದು ಒಂದೇ ಘೋಷಣೆ,
ಸಂಸಾರ ಚಿಕ್ಕದಾದರಷ್ಟೇ ಸಾಧ್ಯ ಅದರ ಪೋಷಣೆ;
ನಿಮ್ಮನ್ನು ಉಳಿಸಿ ಬೆಳೆಸುವುದು ನನಗಿಂದು ಕಷ್ಟ,
ಅದಕ್ಕೇ ಈ ನಿರ್ಧಾರ, ಇಲ್ಲದೇ ಇದ್ದರೂ ನನಗಿಷ್ಟ;
ನಿಮ್ಮಿಬ್ಬರಲಿ ಒಬ್ಬರಿಗಷ್ಟೇ ನೀಡುವೆನು ಜೀವದಾನ,
ಮತ್ತೊಬ್ಬರದು ಜನ್ಮಕ್ಕೇ ಮೊದಲೇ ಇಲ್ಲಿ ಬಲಿದಾನ;
ನನ್ನ ಕೈಯಿಂದಲೇ ನಡೆದಿದೆ ಭ್ರೂಣಹತ್ಯೆ ಇಂದು,
ನನ್ನ ಈ ಪಾಪಕ್ಕೆ ಪ್ರಾಯಶ್ಚಿತ್ತ ಆದೀತು ಎಂದು?
ಪ್ರತಿಕ್ರಿಯೆ (1)