ಮೋಡ ಮುಸುಕಿರೇ
ಕತ್ತಲು ಕವಿದಿದೆ ಮನಕ್ಕೆ
ಹುರುಪಿಲ್ಲ ಕಾರ್ಯದಲಿ
ಮಂಕು ಕವಿದಿಹ ಜಗಕ್ಕೆ

ಶ್ರಮಜೀವಿಗೂ ಕೂಡ
ಬಂತು ಆಕಳಿಕೆ
ಜಗವೆಲ್ಲ ಆಗಿಹುದು ಆಗೋಚರದ ವಶಕ್ಕೆ

ಹೀಗಿರಲು ನಡೆಯಿತು ಅಚ್ಚರಿಯ ವಿದ್ಯಮಾನ.
ಮೋಡ ಚದುರಿತು
ಬಿಟ್ಟು ಬಿಗುಮಾನ

ಧರೆಗಿಳಿಯಿತು ಹೊಸ ಹುರುಪಿನ ರವಿಕಿರಣ ಮೈಮನದಲಿ ಎಂಥದೋ ಸಂಚಲನ

ನರನಾಡಿಗಳು ಈಗ ಚೈತನ್ಯದ ಉಗಮಸ್ಥಾನ
ಇನ್ನೂ ನಿಂತೇ ಇಹಿರೇನು?
ಕೇಳಲಿಲ್ಲವೇ ನವಚೈತನ್ಯದ ಗಾನ!