ಮುಗುಳುನಗೆಯಾಗಿ, ಒಲವು ಸುಳಿಯುತೀಗ,
ಮೌನ ಹೇಳಲು, ಮಾತು ಶರಣಾಯಿತಾಗ,

ಕಣ್ಣ ಕೊನೆಯಲ್ಲಿ ನಿನ್ನ ಮಿಂಚಾದ ನೋಟ ಚೆನ್ನ,
ಸುಳಿಯಲ್ಲಿ ಸಿಕ್ಕ ಮೀನ, ಹಾಗಾದೆ ನಾನು ಚಿನ್ನ ,

ಇರುಳಲ್ಲಿ ನೀನು ಇಣುಕಿ, ಮರೆಯಾದೆ ಏಕೆ ಕೆಣಕಿ,
ಕನಸಲ್ಲಿ ಬಾರಾದೆ, ಮನಸಲ್ಲಿ ಏಕೆ ಉಳಿದೆ,

ತಂಪಾದ ಗಾಳಿ ಬಂದು, ಇಂಪಾದ ರಾಗ ಬೆಸೆದು,
ಮನದಲ್ಲಿ ಒಲವ ಮೀಟಿ, ಹಾಡಾಗಿ ನಾನು ಹಾಡಿ

ಬೆಳೆದಿಂಗಳಾ ಬೆಳಕು, ನಿನ್ನ ಆ ನಗುವ ಪರಿಯು
ಮಂಕಾದ ಚಂದಿರನು, ಅರೆವಳಿಕೆ ನೀಡಿದ ಹಾಗೆ,

ಉಸಿರಲ್ಲಿ ನೀನು ಬೆರೆತೆ, ಸನಿಹದಲಿ ಹಾಗೆ ಸುಳಿದೆ,
ಮಾತಾಡದೆ ನೀನು, ನಗುವಲ್ಲಿ ನನ್ನ ಕೊಂದೆ,