ಬಾನಲ್ಲಿ ಮೊಡುವಾಗ,ಚುಕ್ಕಿವು ಹೇಳಿತಂತೆ

ನೀನಿರದೆ ನಾನು ಹೇಗೆಯಿರಲಿ ಅಂತಂತೆ

 

ಹೊವೊಂದು ಅರಳುವಾಗ ಮಧುವು, ಹೇಳಿತಂತೆ,

ನೀನರದ ಸಿಹಿಯು ಹೇಗೆಯಿರೂವುದಂತೆ

 

ಕನಸೊಂದು ಬೀಳುವಾಗ ನೆನಪಾಗ ಹೇಳಿತಂತೆ

ನೀನರದೆ ನಾನು ಹೇಗೆ ಬರಲಿ ಅಂತಂತೆ

 

ಕಣ್ಣಿಂದ ಜಾರುವಾಗ ಕಣ್ಣೀರು ಹೇಳಿತಂತೆ

ನೀನರದೆ ನಾನು ಹೇಗೇ ಹುಟ್ಟಲಿ ಅಂತಂತೆ

 

ಪ್ರೀತಿಯು ಹೀಗೆ ಅಂತೆ, ಹೇಳದೇನೆ ಆವರಿಸುತ್ತಂತೆ

ಮನದಲ್ಲಿ ಆಸೆಯ ಬಿತ್ತಿ-ಬೆಳೆಸುತ್ತಂತೆ

 

ಜೀವನ ಒಂದೂ ಪಯಣದ ರೀತಿಯಂತೆ

ನಾವದರಲ್ಲಿ ಹೋಗುವ ಜೋಡಿ-ಜೀವಗಳಂತೆ

ನೀನಿಲ್ಲದೆ ನಾನು ನಾನಿಲ್ಲದೆ ನೀನು,

ತಂತಿ ಹರಿದ ವೀಣೆಯಂತೆ

ನಾದ ಮೊಡಿ ಬಂದರೂ ಸ್ವರವು ಕಳೆದು ಹೋದಂತೆ