ಮಧ್ಯರಾತ್ರಿ ನಿದ್ರೆ ಊಳಿಡುವಾಗ
ಸಟಕ್ಕನೆ ಎದ್ದು , ನಿನ್ನ ನೆನಪುಗಳನ್ನ ಸಂಭೋಗಿಸುತ್ತೇನೆ ;
ಅಕ್ಷರಗಳ ಸ್ಖಲನದಲ್ಲಿ ಕವಿತೆಗಳು ಹುಟ್ಟುತ್ತವೆ.!
**** ***** *****
ಚಾಯ್ ದುಕಾನಿನಲ್ಲಿ ಕುದಿ ಕುದಿ ಡಿಕಾಕ್ಶನ್
ಸರ್ರ್ ಸರ್ರ್ ನೇ ಕುಡಿದು ಬಿಡುತ್ತೇನೆ
ಇದೇನು ಬಿಸಿಯಲ್ಲ ! ಅಲ್ಲಿದೆ ನೋಡಿ
ಕವಿತೆಯಾಗಿ ಉರಿಯುತ್ತಿರುವ ನೆನಪುಗಳು
**** ***** *****
ಹೃದಯ ಬಾಡಿಗೆಗೆ ಇದೆ ಎಂದು
ಬೋರ್ಡ್ ಹಾಕಿದ್ದೆ
ಒಂದು ರಾಶಿ ಕವಿತೆಗಳು ಕೇಳಿಕೊಂಡು ಬಂದವು..!
**** ***** *****
ಸ್ವಲ್ಪ ಇರ್ರ್ರಿ ಮಾರಾಯ್ರೆ ,
ನೆನಪುಗಳನ್ನ ಕಾಲನ ಕುಕರ್ ನಲ್ಲಿ ಇಟ್ಟಿದ್ದೇನೆ
ಕವಿತೆಗಳ ಉಂಡು ಹೋಗಿರಿ.!
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಶ್ರೀ ಕ್ಷೇತ್ರ ಬಾಲ ಮಹಾತ್ಮೆ
ರಸ್ತೆ
'ಸಾಫ್ಟ್' ಸಂಕಟಗಳು
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)