ಏನಿದು ಮೌನ , ಎನಿತು ಧ್ಯಾನ
ಅಲೆಮಾರಿ ನೀರವ ಮನಸಿಗೆ
ಉತ್ತರದ ತಲ್ಲಣ !
ಸಾವಿನ ಮೌನಕ್ಕೆ, ನೋವಿನ ಉತ್ತರ
ದಾರಿಯ ಮೌನಕ್ಕೆ , ದಿಕ್ಕಿನ ಉತ್ತರ
ಮುಂಜಾವಿನ ಮೌನಕ್ಕೆ, ಕಲರವದ ಉತ್ತರ
ಓ ಮೌನಿ ನಿನದೇನೆ, ಅರಿಯದ ಉತ್ತರ ?
ಬೆಳೆದಿಂಗಳ ಮೌನಕ್ಕೆ, ಪಿಸುಮಾತಿನ ಉತ್ತರ
ಶರಧಿಯ ಮೌನಕ್ಕೆ, ನಾವಿಕನ ಉತ್ತರ
ತರಗೆಲೆಯ ಮೌನಕ್ಕೆ, ಟಿಸಿಲಿನ ಉತ್ತರ
ಮೌನ ಪ್ರೇಯಸಿಯೇ, ಹೇಳೇ ನೀ ಉತ್ತರ ?
ತುಟಿಯ ಮೌನಕ್ಕೆ , ನಗುವಲ್ಲವೇ ಉತ್ತರ
ನಿರ್ಭಾವ ಮೊಗದಲ್ಲಿ, ಕಣ್ಣಲ್ಲವೇ ಉತ್ತರ,
ಉಳಿಸಿರುವೇ ಯಾಕೆ ಈ ಕಾತರ
ನಿನ್ನ ಮೌನ-ಭಾಷೆಗೆ , ಯಾವುದೇ ಉತ್ತರ ?
ಪ್ರತಿಕ್ರಿಯೆ (1)