ಹಸಿರಾಡುವ ಧರೆಯಲಿ
ನಾ ಹರಿಣಿಯಾಗಿ
ಸ್ವಚ್ಚಂದ ಬಾನಿನಲಿ
ನಾ ಬಾನಕ್ಕಿಯಾಗಿ
ಹರಿಯುವ ತೊರೆಯಲಿ
ನಾ ಮೀನಾಗಿ
ನಲಿದಾಡುವ ಆಸೆ, ಈ ಪುಟ್ಟ ಮನಸಿನಲಿ
ಈ ಮುಗ್ಧ ಮನಸಿನ ಕನಸಿನಲಿ
ಮುಂಜಾವಿನ ಇಬ್ಬನಿಯಲ್ಲಿ,
ನನ್ನ ªಮೊಗವ ಕಂಡೆ
ಮುಸ್ಸಂಜೆಯ ಬಣ್ಣದಲ್ಲಿ
ನನ್ನ ಬಿಂಬವ ಕಂಡೆ
ಪೌರ್ಣಿಮೆಯ ಚಂದಿರನು,
ನನ್ನ ನೋಡಿ ನಕ್ಕಾಗ,
ನಲಿದಾಡಿತು ಮನಸು,
ಈ ಪುಟ್ಟ ಮನಸು
ಪ್ರತಿಕ್ರಿಯೆ (1)