ಮುಂದೆ ಸಂಗೀತ ಪಕ್ಕದಲಿ ತೆಂಕಣದ ಸರಸ ಕವಿಗಳ ಕೂಟ
ಹಿಂದೆ ಜಣಜಣಿಸುವ ಬಳೆಕೈಗಳ ಸುಂದರಿಯರ ಚಾಮರ ಸೇವೆ
ಉಂಟೆಂದಾದರೆ ಸವಿ ನೀ ಸಂಸಾರಚಪಲಗಳ ಬಿಡದೆಲೆ;
ಇಲ್ಲದಿರೆ ನಿನ್ನನೇ ಮರೆತು ಸೇರಿಕೋ ತನ್ಮಯಸ್ಧಿತಿಗೆ ಕೂಡಲೆ!
ಸಂಸ್ಕೃತ ಮೂಲ (ಭರ್ತೃಹರಿಯ ವೈರಾಗ್ಯ ಶತಕದಿಂದ):
ಅಗ್ರೇ ಗೀತಂ ಸರಸ ಕವಯಃ ಪಾರ್ಶ್ವತೋ ದಾಕ್ಷಿಣಾತ್ಯಾಃ
ಪಶ್ಚಾಲ್ಲೀಲಾವಲಯರಣಿತಣಂ ಚಾಮರಗ್ರಾಹಿಣೀನಾಂ|
ಯದ್ಯಸ್ತ್ಯೇವಂ ಕುರು ಭವರಸಾಸ್ವಾದನೇ ಲಂಪಟತ್ವಂ
ನೋಚೇಚ್ಚೇತಃ ಪ್ರವಿಶ ಸಹಸಾ ನಿರ್ವಿಕಲ್ಪೌ ಸಮಾಧೌ||
-ಹಂಸಾನಂದಿ
ಕೊ: ಇವತ್ತು ತಾನೇ ___LINK_OPEN_href="http://hamsanada.blogspot.com/2011/05/blog-post_14.html"___ಸಿಂಹ ಎಸ್ ಎನ್ ಅವರ ಗೂಗಲ್ ಬಜ್ ನಲ್ಲಿ ಓದಿದ ಶ್ಲೋಕ. ನಿರ್ವಿಕಲ್ಪ ಸಮಾಧಿಗೆ ನನ್ನ ಅನುವಾದ ಏನೇನೂ ಚೆನ್ನಾಗಿಲ್ಲವೆಂದು ಗೊತ್ತಿದ್ದೂ ಹಾಕುವ ಧೈರ್ಯ ಮಾಡಿದ್ದೇನೆ!
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!