ಮನಸಿನೊಳಗೆ ಮರೆತ ನೆನಪುಗಳು
ಮತ್ತೆ ಮತ್ತೆ
ಆರಿದ ಗಾಯವ ಕೆದಕಿ
ನೋವ ತರಿಸುವುದೇಕೆ.
ಮರೆತೆನೆಂದಿರುವ
ಮರೆಯಲು ನಿರ್ಣಯಿಸಿದ
ಮರೆಯಲೇಬೇಕಾದ
ಮನಸಿನ ದುಡುಕು
ನಿರ್ಣಯಗಳಿಗೆ
ಸಾವು ನೀಡುವ
ಬಗೆಯಾವುದು?
ಬಗೆಹರಿಸಲು ಪಟ್ಟ
ನೋವಿನಾ ಛಾಯೆಯ
ಮಸಿಯ ಅಳಿಸುವುದೆಂತ,
ಅರಿಯದೇ ಮನ
ದಿನದಿನವೂ ಕೊರಗಿ,
ಕಾಡುವ ಕಹಿ ನೆನಪುಗಳ
ಒರೆಸಿ ಸಿಹಿನೀರ
ತುಂಬುವುದು ಹೇಗೆ
ಎಂದರಿಯದೆ
ಸೊರಗಿರುವ ಮನದ
ಸಂತೈಸುವುದೆಂತ..?
ಮನದ ಮೈದಡವಿ
ಹೊಸ ಪಯಣಕೆ
ಅಣಿಯಾಗಿಸಿ
ಹುಡುಕುವ ಪ್ರತಿ
ದಾರಿಯಲಿ ತೊಡರಾಗುವ
ಹಳೆಯ ಕಹಿ ನೆನಪುಗಳ
ಕಲ್ಲಿನಾ ಮಳೆಗೆ
ಸಮಾದಿ ಕಟ್ಟುವುದಾದರು ಹೇಗೆ?
ಮಂಸೋರೆ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (2)