ಜೀವನವೆಂಬುದೊಂದು ರೈಲು - ಹಳಿ ಇದ್ದಂತೆ
ಸರಿಯಾಗಿ ಸಾಗಿದರೆ ತಲುಪುವೆವು ಗಮ್ಯವ
ಹಳಿಯ ತಪ್ಪಿದರೆ ತಪ್ಪದು ಘೋರ ದುರಂತ
ಜೀವನವೆಂದರೆ ಸುಲಭವಾದ ದಾರಿಯಲ್ಲ
ಅಲ್ಲಲ್ಲಿ ಬರುವುದು ಅನಿರೀಕ್ಷಿತ ತಿರುವುಗಳು
ಆ ತಿರುವುಗಳ ದಾಟಿ ಮುನ್ನಡೆಯಬೇಕಿಂದು
ಕಷ್ಟಗಳು ಬಂದವು ನಿಲುಗಡೆಗಳಂತೆ ಅಲ್ಲಲ್ಲಿ
ಅಂಜದಿರು ಅಳುಕದಿರು ನೀ ಆ ಕಷ್ಟಗಳ ಕಂಡು
ಮುಂದಿರುವ ಗುರಿಯ ಸಾಧಿಸು ಸಾಗುತಲಿ ಮುಂದೆ..
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!