ಅಪ್ಪ ಅಮ್ಮ.....!
ತಾವೇ ಕಟ್ಟಿಕೊಂಡ ಸ್ವ ಪ್ರತಿಷ್ಠೆಯ ಗೂಡಿನಲ್ಲಿ
ಕನಸಿನ ಮೊಟ್ಟೆ ಇಟ್ಟು......
ಕಾವು ಕೊಡುತ್ತ ಕುಳಿತು ಬಿಟ್ಟಿದ್ದಾರೆ.!
ಅವರೆದುರು ನನ್ನ ಕನಸು.
ಮಳೆಗಾಲದ ಮಾವಿನಷ್ಟು ಅಗ್ಗ !
ಪಕ್ಕದ ಮನೆಯ ಹುಡುಗನೊಂದಿಗೆ
ತಾಳೆ ನೋಡಿ.....
ತಾಳೆಗರಿ ತೆಗೆಯುವ ಭವಿಷ್ಯಕಾರರಂತೆ !
ಅವರಿಗೆ...........!
ಕಾರಲ್ಲಿ ಕುಳಿತು ಕಂಠ ಪೂರ್ತಿ ಬಂಗಾರ
ಬಿಗಿದುಕೊಳ್ಳುವ ಬಯಕೆ !
ಅದಕಾಗಿ ನಾನು ವೈದ್ಯನೋ,ಅಭಿಯಂತರನೋ.
ಏನೇನೋ ಆಗಬೇಕೆಂಬ ಲೆಕ್ಕಾಚಾರ
ಪರೀಕ್ಷೆಗೆ ತೆರಳುವ ಮುನ್ನ ಅಜ್ಜಿಯ ಆಶಿರ್ವಾದ
" ಅತಿ ಹೆಚ್ಚು ರೇಂಕ್ ಪಡೆದು ಪಾಸಾಗು ಮಗು"-
ಅಜ್ಜಿಯ ಆಶಿರ್ವಾದ ಫಲಿಸಿದೆ.............
ಮೊನ್ನೆ ಸಿ.ಇ.ಟಿ ಫಲಿತಾಂಶ ಬಂದಾಯ್ತು
ಪಡೆದದ್ದು "32000 "ನೇ ರೇಂಕ್
ಪಾಪ ! ಅಜ್ಜಿಗೇನು ಗೊತ್ತು....
ಆದರೆ.......
ಅಪ್ಪ ಅಮ್ಮ ಈಗಲೂ ನನ್ನನ್ನು ಕೇಳಿಲ್ಲ
"ಮಗಾ ನೀನು ಏನಾಗ ಬಯಸುವಿ ಎಂದು "
ಪ್ರತಿಕ್ರಿಯೆ (4)