-: ಓ ಪ್ರೀತಿಯೆ :- ಇಂದ : ಪ್ರದೀಪ್ ರ ಜಮಖಂಡಿ

ನಕ್ಕು ನಲಿಯುವ ನಿನ್ನದೊಂದು
ಪ್ರೀತಿ ಮಾತಲಿ ನಾನು ಇಂದು
ಪ್ರಣಯ ಅಂಗಳದಲಿ ಭಕ್ತನಾದೆ
ಓ ಒಲವಿನ ದೆವಿಯೆ!!

ತಾರೆ ಇಳಿದು ಧರೆಗೆ ಬಂದ್ರು
ಭುಮಿ ಬಿಗಿದು ಲಾವಾ ಬಂದ್ರು
ನಿನ್ನ ಕೈ ಬಿಡಲಾರೆ ಯೆಂದು
ಓ ಮುದ್ದು ಕಣ್ಮಣಿಯೆ!!

ನಸುನಾಚಿಕೆಯಲಿ ನನ್ನ ಸೆಳೆದು
ಪಿಸುಮಾತಲಿ ನನ್ನ ಕರೆದು
ತುಸು ಪ್ರೀತಿಯ ಕನಸು ತೊರು
ಓ ಎದೆಚಿತ್ತೆನ್ನ ರಾಣಿಯೆ!!

ಪುರೈಸಲಾಗದ ಕನಸಾಗದಿರು
ನಿನ್ನ ಬಾಳಿಗೆ ನಾನೆಂದು ಕಲ್ಪತರು
ನನ್ನ ಬದುಕಲಿ ಬಂದು ನೆಲೆಸು
ಓ ಪ್ರೀತಿಯ ರಾಯಭಾರಿಯೆ!!