ಜನ ಸಂಚಾರ ಜಾಸ್ತಿ ಇಲ್ಲದ ಒಂದು ಬೀದಿಯಲ್ಲಿ ಹೋಗುತ್ತಿದ್ದೆ. ರಸ್ತೆಯ ಇಕ್ಕೆಲದಲ್ಲೂ ವಿವಿಧ ತರಹದ ಹೂ ಗಿಡಗಳನ್ನು ಬೆಳೆಸಿದ್ದರು. ಒಂದಕ್ಕಿಂತ ಒಂದು ಚೆನ್ನಾಗಿತ್ತು. ನೋಡಲು ಎಷ್ಟು ಸುಂದರ ಎಂದರೆ ನನಗೆ ಪಾರ್ಕ್ನಲ್ಲಿ ಸುತ್ತಾಡಿದ ಹಾಗೆ ಆಯಿತು. ಆ ಬೀದಿಯ ವಿವರ ಕೇಳಬೇಡಿ. ಗೊತ್ತಾದರೆ ನಾಳೆಯೇ ರಸ್ತೆ ಅಗಲೀಕರಣ, BWSSB, ಮೋರಿ ರಿಪೇರಿ.. ಯವರು ಅಲ್ಲಿ ಹೋಗಿ ರಸ್ತೆ ಹಾಗೂ ಗಿಡ/ಮರಗಳನ್ನು ರಣ ರಂಪ ಮಾಡಿಯಾರು. ಯಾವ ಹೂವಿನ ಚಿತ್ರವೂ ತೆಗೆಯಲಿಲ್ಲ. ಆದರೆ ಈ ಹೂವಿನ ಫೋಟೋ ತೆಗೆಯದೇ ಮುಂದೆ ಕಾಲಿಡಲು ಮನಸ್ಸಾಗಲಿಲ್ಲ.ಜತೆಗೆ ಕಾಯಿಯ ಚಿತ್ರವನ್ನು ಹಾಕಿರುವೆ. ನಿಮಗೂ ಗೊತ್ತಿರುವ ಹೂವೇ.. ಆದರೆ ಈ ಹೂವಿಗೂ "ಜೀಸಸ್‌"‌ಗೂ  ಏನು ಸಂಬಂಧ ಹೇಳುವಿರಾ?

-ಗಣೇಶ.