ಅದೇನು ಚೆಲುವು ನಿನ್ನದು
ಅದೇನು ಮಾತು ನಿನ್ನದು
ಓ೦ದೇ ಒ೦ದು ಸ್ಪರ್ಷಸಾಕು
ಮತ್ತೆ ಬದುಕಿಗೇನು ಬೇಕು
ತೊದಲು ನುಡಿಯ ನುಡಿಯುತಿರಲು
ಸ೦ಗೀತವೇಕೆ ಬೇಕು
ಗೋಡೆಗೆಲ್ಲ ಬಣ್ಣ ಹಚ್ಚಿ, ಬರಹ ಬಿಚ್ಚಿ ಆಡುತಿರಲು
ಮತ್ತೆ ಮನೆಗೆ, ಸಿ೦ಗಾರವೇಕೆ ಬೇಕು
ದುಡಿದು ದಣಿದು ಮನೆಗೆ ಬರಲು
ಕೈಯನಿಡಿದು ಒಳಗೆ ಸೆಳೆವ ಸಳೆತವಿರಲು, ಅಮಲು ತೆವಲು ಏಕೆ ಬೇಕು
ನಿನ್ನ ನಾನು ಬೆಳಕನಿತ್ತು ಬೆಳೆದರೆ
ಧರೆಯಲೆಲ್ಲ ಹರುಷತರಲು ಮತ್ಯಾವ ತತ್ವ ಬೇಕು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!