ಮನದ ಮನೆಯಲ್ಲಾದ
ಸಂಭ್ರಮದ ಮಿಲನಕ್ಕೆ....!
ಮನವು ಈಗಷ್ಟೇ ಉಸುರಿತು
ಕಾವ್ಯ ಕನ್ನಿಕೆ ಬಸುರಿ.!
ತಕ್ಷಣದ ಪ್ರಸವಕ್ಕೆ ಕ್ಷಣಗಣನೆ
ಶಬ್ದಗಳ ಮಲ್ಲಿಗೆ ಮುಡಿಸಿ
ಅರ್ಥಗಳ ಮುತ್ತನ್ನಿಟ್ಟು ಸೀಮಂತ !
" ಕನ್ನಿಕೆಯ ಪ್ರಸವವೇ ?
ಇದು ಭಾವನೆಯ ಚಾದರದಡಿಯ ಹಾದರ "
ಹಾಗೆಂದ ಕಟಕಿಮಾತಿಗೆ ತಲೆಗೊಡದೆ
ಹುಡುಕಾಡಿದೆ ಇಲ್ಲಿ ಇಲ್ಲದ ಹೆಸರು !
ಅರಸಿದರೂ ಸಿಕ್ಕ ಹೆಸರು ಅರಸಿಯದೇ ...!
ಹುಟ್ಟುವುದು ಹೆಣ್ಣು....ನಿಶ್ಚಿತ
ಏಕೆಂದರೆ....
"ಗಂಡು ಹೆಣ್ಣಂತೆ ಕಾವ್ಯವಾಗಲಾರ
-ಕಾವ್ಯಕ್ಕೆ ವಸ್ತುವಾಗುತ್ತಾನೆ"
ಕ್ಷಣದಲ್ಲಿ ಪ್ರಸವ ವೇದನೆ ಶುರು....
ಆದರೆ.....
ವಿಮರ್ಶೆಗಳಿಂದ ಆಗಿದ್ದು..."ಸಿಸರಿಯನ್"
ಹುಟ್ಟಿದ್ದು .....ಈ ಕಾವ್ಯ ಕೂಸು..
ನೀವಾದರೂ ಇದ......ಕೊಂದು.!
ಕ್ಷಮಿಸಿ...ಇದಕ್ಕೊಂದು ಹೆಸರಿಡುವಿರಾ ?
ಪ್ರತಿಕ್ರಿಯೆ (12)