ಓ ಮಗುವೇ ಕಲಿಸಿಕೊಡು ಜಗಕ್ಕೆ
ನಿನ್ನ ಹೂನಗುವ.
ಮನದಿ ಕಲ್ಮಶವ ಇಟ್ಟು
ಮುಗುಳ್ನಗೆಯ ಮುಖವಾಡವ ತೊಟ್ಟು
ಹುಸಿನಗೆಯ ಬೀರುವ ಮಂದಿಗೆ
ಮಗುವೇ ಕೊಡು ನಿನ್ನ ಹೂನಗುವ.
ದಟ್ಟ ಅಡವಿಯ ನಡುವ ಕೊಳದ ಬಿಳಿದಾವರೆಯಂಥ ಪ್ರಶಾಂತ ನಗುವ
ಆಗಷ್ಟೇ ಬಿರಿದ ಮಲ್ಲಿಗೆಯ ತುಟಿಯ ಇಬ್ಬನಿ ಮಣಿಯಂಥೇ ಹೊಳೆವ ಮಕರಂಧ ನಗುವ
ಬಂದವರು ಯಾರಾದರೂ,ಯಾರು ಎತ್ತಿ ಮುದ್ದಾಡಿದರೂ ಎಲ್ಲರ ಕಂಡು,ನಗುವ
ಆ ಸುಕೋಮಲ,ನಿರ್ಮಲ ಶುಭ್ರ ಜೇನ್ ನಗುವ ಕಲಿಸಿ ಕೊಡು ಮಗುವೇ ಈ ಜಗಕ್ಕೆ
ಜಾತಿಯಾವುದಾದರೂ,
ಬಡವ ಶ್ರೀಮಂತರಾದರೂ,
ಮೇಲುಕೀಳು ಲೆಕ್ಕಿಸದೇ ಎಲ್ಲ ಭೇದವ ಮರೆಸುವ ಸೂರ್ಯಪ್ರಕಾಶಿತ ನಗುವ ಕಲಿಸಿಕೊಡು ಮಗುವೇ ಕಲಿಸಿಕೊಡು.
ಪ್ರತಿಕ್ರಿಯೆ (1)