ಪೀಟರ್ ನ ಮಗ : ಅಪ್ಪ ನಂಬಿಕೆ ಹಾಗೂ ರಹಸ್ಯದ ವ್ಯತ್ಯಾಸ ಏನು?

ಪೀಟರ್ : ನೀನು ನನ್ನ ಮಗ, ಅದು ನಂಬಿಕೆ - ನಿನ್ನ ಸ್ನೇಹಿತನೂ ನನ್ನ ಮಗ, ಅದು ರಹಸ್ಯ

_____________________________________________________________

ಕೆಲಸದಾಕೆ : ಅಮ್ಮಾವ್ರೇ ನಿಮ್ಮ ಹಳೆಯ ಸೀರೆಗಳನ್ನು ನನಗೆ ಕೊಡಬೇಡಿ

ಮನೆಯಾಕೆ : ಯಾಕೆ ಏನಾಯ್ತು?

ಕೆಲಸದಾಕೆ : ಆ ಸೀರೆಗಳನ್ನು ಉಟ್ಟರೆ ನಿಮ್ಮೆಜಮಾನರು ನೀವೆಂದು ತಿಳಿದು ನನ್ನ ಬಳಿಯೂ ಬರುವುದಿಲ್ಲ

________________________________________________________________

ಜಾನ್ : ಡೆಟಾಲ್ ಸೋಪ್ ಇದ್ಯಾ

ಪೀಟರ್ : ಹಾ ಇದೆ

ಜಾನ್ : ಚೆನ್ನಾಗಿದ್ಯ?

ಪೀಟರ್ : ಹಾ ಚೆನ್ನಾಗಿದೆ

ಜಾನ್ : ಒಳ್ಳೆ ಕ್ವಾಲಿಟಿ ತಾನೇ?

ಪೀಟರ್ : ಹೌದಪ್ಪ ಒಳ್ಳೆ ಕ್ವಾಲಿಟಿನೆ ಯಾಕೆ

ಜಾನ್ : ಹಾಗಿದ್ರೆ ಅದ್ರಲ್ಲಿ ಚೆನ್ನಾಗಿ ಕೈ ತೊಳೆದು ಒಂದು ಕಿಲೋ ಅಕ್ಕಿ ಕೊಡು

________________________________________________________________

ಪೀಟರ್ : ಡಾಕ್ಟರ ನೀವು ಹೇಳಿದ್ರಿ ಬೆಳಗ್ಗಿನ ಹೊತ್ತು ಚೆನ್ನಾಗಿ ಆಟ ಆಡಿದರೆ ದೇಹ ಆರೋಗ್ಯವಾಗಿರುತ್ತೆ ಅಂತ, ಆದರೆ ಏನೂ ಪ್ರಯೋಜನವಾಗಲಿಲ್ಲ..

ಡಾಕ್ಟರ : ಯಾವ ಆಟ ಆಡಿದಿರಿ?

ಪೀಟರ್ : ಡಾಕ್ಟರ, ಮೊಬೈಲ್ ನಲ್ಲಿ Snake ಆಟ ಆಡಿದೆ !!!

_________________________________________________________________

ಪೀಟರ್ ಸಿಗರೇಟಿಗೆ ಹತ್ತಿಂಚು ಉದ್ದದ ಪೈಪ್ ಸೇರಿಸಿ ಸೇದುತ್ತಿದ್ದ. ಅದನ್ನು ನೋಡಿದ ಜಾನ್ ಕೇಳಿದ

ಜಾನ್ : ಏನೋ ಪೀಟರ್ ಇಷ್ಟುದ್ದ ಪೈಪ್ ಸೇರಿಸಿ ಸಿಗರೆಟ್ ಸೇದುತ್ತಿದ್ದಿಯ ಯಾಕೆ?

ಪೀಟರ್ : ಡಾಕ್ಟರ ಹೇಳಿದ್ದಾರೆ ಬೀದಿ ಸಿಗರೆಟ್ ಇಂದ ದೂರವಿರು ಎಂದು ಅದಕ್ಕೆ...

___________________________________________________________________

ಜಾನ್ : ಯಾಕೋ ಬೇಜಾರಾಗಿದ್ದೀಯ?

ಪೀಟರ್ : ನಾನು ಅಪ್ಪ ಆಗುತ್ತಿದ್ದೀನಿ

ಜಾನ್ : ಅದಕ್ಕೆ ಯಾಕೆ ಬೇಜಾರು?

ಪೀಟರ್ : ಈ ವಿಷಯ ನನ್ನ ಹೆಂಡತಿಗೆ ಗೊತ್ತಿಲ್ಲ....

___________________________________________________________________

  ಪೀಟರ್ ಟ್ಯೂಬ್ ಲೈಟ್ ಕೆಳಗೆ ಬಾಯಿ ತೆರೆದು ನಿಂತಿದ್ದಾನೆ ಏಕೆ ಹೇಳಿ? ಅವನಿಗೆ ಡಾಕ್ಟರ ಹೇಳಿದ್ದಾರೆ ರಾತ್ರಿ ಊಟ "ಲೈಟ್" ಆಗಿರಬೇಕೆಂದು. _______________________________________________ ಒಂದು ಬೀದಿ ನಾಯಿ ಪೀಟರ್ ನನ್ನು ಅಟ್ಟಿಸಿಕೊಂಡು ಹೋಗುತ್ತಿತ್ತು, ಆದರೂ ಪೀಟರ್ ನಗುತ್ತಿದ್ದ ಪಕ್ಕದಲ್ಲಿದ್ದ ಜಾನ್ ಕೇಳಿದ ಯಾಕೆ ನಗುತ್ತಿದ್ದೀಯ? ಪೀಟರ್ ಹೇಳಿದ ನನ್ನ ಬಳಿ ಇರುವುದು ಏರ್ಟೆಲ್ ಫೋನ್ ಆದರೂ ಹಚ್ ನಾಯಿ ನನ್ನನ್ನು ಹಿಂಬಾಲಿಸುತ್ತಿದೆ __________________________________________________ ಪೀಟರ್ ಗೆ ರಾತ್ರಿ ತಾನು ಕೊಲೆ ಆದ ಹಾಗೆ ಕನಸು ಬಿಟ್ಟು. ಮರುದಿನವೇ ತನ್ನ ಬ್ಯಾಂಕ್ ಖಾತೆಯನ್ನು ಮುಚ್ಚಿಬಿಟ್ಟ ಏಕೆ ಗೊತ್ತೇ? ಆ ಬ್ಯಾಂಕಿನ ಅಡಿಬರಹ ಹೀಗಿತ್ತು. "ನಿಮ್ಮ ಕನಸುಗಳನ್ನು ನಾವು ಸಾಕಾರಗೊಳಿಸುತ್ತೇವೆ" ______________________________________________________ ಪೀಟರ್ ನ ಹೆಂಡತಿ : ರೀ ನಮ್ಮ ಅಡುಗೆ ಮನೆಗೆ ಕಳ್ಳ ನುಗ್ಗಿದಾನೆ, ಅವನು ನಾನು ಮಾಡಿದ್ದ ಕೇಕ್ ತಿನ್ನುತ್ತಿದ್ದಾನೆ ಪೀಟರ್ : ಹಾಗಿದ್ದರೆ ನಾನು ಯಾರಿಗೆ ಫೋನ್ ಮಾಡಲಿ, ಪೋಲಿಸ್ ಗೋ ಅಥವಾ ಆಂಬುಲೆನ್ಸ್ ಗೋ? _________________________________________________________ ಪೀಟರ್ ಒಮ್ಮೆ ತನ್ನ ಹೆಂಡತಿಯನ್ನು ಭೇಟಿ ಮಾಡಲು ಆಕೆಯ ಆಫಿಸಿಗೆ ಹೋದಾಗ ಅಲ್ಲಿ ಆತನ ಹೆಂಡತಿ ಅವನ ಬಾಸ್ ನ ತೊಡೆಯ ಮೇಲೆ ಕುಳಿತು ಏನೋ ಬರೆಯುತ್ತಿದ್ದಳು ಅಂದನ್ನು ಕಂಡ ಪೀಟರ್ ತನ್ನ ಹೆಂಡತಿಗೆ ಪೀಟರ್ : ನಡಿ ಸ್ಟೆಲ್ಲಾ ಇಂಥಹ ಆಫಿಸಿನಲ್ಲಿ ನೀನು ಕೆಲಸ ಮಾಡುವುದು ಬೇಡ. "ಇಲ್ಲಿ ಕೆಲಸಗಾರರು ಕುಳಿತುಕೊಳ್ಳಲು ಒಂದು ಕುರ್ಚಿ ಸಹ ಇಲ್ಲ" ಎಂದನು _______________________________________________________________ ಪೀಟರ್ ಒಮ್ಮೆ ಆಸ್ಪತ್ರೆಗೆ ಯಾರನ್ನೋ ಭೇಟಿ ಮಾಡಲು ಹೋದಾಗ ಪಕ್ಕದ ಹಾಸಿಗೆಯಲ್ಲಿದ್ದ "ಚೀನೀ" ವ್ಯಕ್ತಿಯೊಬ್ಬ ಪೀಟರ್ ನ ನೋಡಿ ಚೀನಿ : ಚಿಂಗ್ ಚಾಂಗ್ ಮೊ ಚು ಚಾ , ಎಂದು ಹೇಳಿ ಸತ್ತು ಹೋದ ಪೀಟರ್ ಗೆ ಕುತೂಹಲ ತಾಳಲಾಗದೆ ಅದೇನೆಂದು ತಿಳಿದುಕೊಳ್ಳಲು ಚೀನಾ ಗೆ ಹೋದ ಅಲ್ಲಿ ಅವನಿಗೆ ಅದರ ಅರ್ಥ ತಿಳಿಯಿತು ಅದರ ಅರ್ಥ "ಎ ನಾಯಿ ನನ್ನ Oxygen ಪೈಪ್ ಮೇಲೆ ಕಾಲಿಟ್ಟಿದ್ದೀಯ ತೆಗಿ" ಎಂದು. __________________________________________________________________________ ಜಾನ್ : ಪೀಟರ್ ಏನು ಮಾಡುತ್ತಿದ್ದೀಯ? ಪೀಟರ್: ನನ್ನ ಮಗುವಿನ ಧ್ವನಿ ರೆಕಾರ್ಡ್ ಮಾಡ್ತಿದೀನಿ ಜಾನ್ : ಯಾಕೆ? ಪೀಟರ್ : ನಾಳೆ ಅವನು ದೊಡ್ಡವನಾದ್ಮೇಲೆ ಅವನನ್ನು ಇದರ ಅರ್ಥ ಕೇಳಬೇಕು ಅದಕ್ಕೆ ______________________________________________________________________________ ಪೀಟರ್ : ಡಾಕ್ಟರ ದಿನ ರಾತ್ರಿ ನನ್ನ ಕನಸಿನಲ್ಲಿ ಇಲಿಗಳು ಬಂದು ಫೂಟ್ಬಾಲ್ ಆಡುತ್ತವೆ ಡಾಕ್ಟರ : ತಗೋಳಿ ಈ ಮಾತ್ರೆ ಹಾಕಿಕೊಳ್ಳಿ, ಒಳ್ಳೆ ನಿದ್ರೆ ಬರುತ್ತೆ ಪೀಟರ್ : ಡಾಕ್ಟರ, ನಾಳೆ ಹಾಕಿ ಕೊಳ್ಳಬಹುದ ಈ ಮಾತ್ರೆ? ಡಾಕ್ಟರ : ಯಾಕೆ? ಪೀಟರ್ : ಇಂದು ಫೈನಲ್ ಪಂದ್ಯ ಇದೆ ಅದಕ್ಕೆ _________________________________________________________________________________ ಪೋಲಿಸ್ ಅಧಿಕಾರಿ ಪೀಟರ್ ಗೆ ಪೋಲಿಸ್ : ಗಲ್ಲಿಗೇರಿಸುವ ಮುಂಚೆ ನಿನ್ನ ಕೊನೆ ಆಸೆ ಏನು? ಪೀಟರ್ : ನನ್ನನ್ನು ತಲೆ ಕೆಳಗೆ ಕಾಲು ಮೇಲೆ ಮಾಡಿ ಗಲ್ಲಿಗೆ ಹಾಕಿ ಎಂದ __________________________________________________________________________________  ಪೀಟರ್ ತನ್ನ ಮಗನಿಗೆ : ಈ ಬಾರಿಯ ಪರೀಕ್ಷೆಯಲ್ಲಿ ನೀನು ಫೈಲ್ ಆದರೆ ನನ್ನ ಅಪ್ಪ ಎಂದು ಕರೀಬೇಡ ಸ್ವಲ್ಪ ದಿನದ ನಂತರ ಪೀಟರ್ : ಏನಾಯ್ತು ಪರೀಕ್ಷೆ ಫಲಿತಾಂಶ? ಮಗ : ಸುಮ್ಮನೆ ನನ್ನ ತಲೆ ಕೆಡಿಸಬೇಡ "ಪೀಟರ್" ___________________________________________________________________________________ ಭಿಕ್ಷುಕ - ಸ್ವಾಮಿ ದಯವಿಟ್ಟು ಏನಾದರೂ ಧರ್ಮ ಮಾಡಿ ಪೀಟರ್ - ನೂರರ ನೋಟು ತೆಗೆದು ಎರಡು ಐವತ್ತು ಇದೆಯಾ ಎಂದ? ಭಿಕ್ಷುಕ - ಒಂದು ಐವತ್ತು ತನಗೆಂದು ಭಾವಿಸಿ ಖುಷಿಯಿಂದ ಇದೆ ಎಂದ ಪೀಟರ್ - ಹಾಗಿದ್ದರೆ ಮೊದಲು ಅದನ್ನು ಖರ್ಚು ಮಾಡು ಆಮೇಲೆ ಭಿಕ್ಷೆ ಬೇಡು ಎಂದ ____________________________________________________________________________________ ಪೀಟರ್ : ನನ್ನ ಗೆಳತಿಗೆ ಅವಳ ಹುಟ್ಟು ಹಬ್ಬಕ್ಕೆ ಎಂದು ಉಡುಗೊರೆ ಕೊಡಲಿ? ಜಾನ್ : ನೋಡಲು ಹೇಗಿದ್ದಾಳೆ? ಪೀಟರ್ : ಬಹಳ ಸುಂದರವಾಗಿದ್ದಾಳೆ ಜಾನ್ : ಹಾಗಿದ್ದಲ್ಲಿ ನನ್ನ ಮೊಬೈಲ್ ನಂಬರ್ ಕೊಟ್ಟುಬಿಡು _____________________________________________________________________________________