"ನನ್ನವಳನ್ನು ಈಗ ಇಡಿಯಾಗಿ...
ಶಬ್ಧಗಳಲ್ಲಿಯೂ ಹಿಡಿದಿಡಲಾಗುತ್ತಿಲ್ಲ.."
ಆಗ...
ಅವಳ..ಜಡೆ...ನಾಗರ ಹಾವಿನ ಹೆಡೆ !
ಆದರೆ ಈಗ...
ಚೀಲದಲ್ಲಿಡಬಹುದಾದ ಛೋಟಾ ಕೊಡೆ !
ಆಗ....
ಅವಳ ಹುಬ್ಬು..ಕಾಮನ ಬಿಲ್ಲಿನಂತೆ ಸುಂದರ !
ಆದರೆ ಈಗ..
ಕಸಬರಿಗೆ ಕಡ್ಡಿಯೂ ನಾಚುವಷ್ಟು ಸಪೂರ
ಆಗ...
ಅವಳ ನಾಸಿಕ ನೀಳವಾದ ಸಂಪಿಗೆ !
ಆದರೆ ಈಗ...
ನೊಣವೂ ಬಳಿಸುಳಿಯುವದಿಲ್ಲ ಅದರ ಕೆಟ್ಟ ಕಂಪಿಗೆ !
ಆಗ...
ಅವಳದು ಸಿಂಹಕಟಿ, ನಡೆದರೇ..ನವಿಲಿನ ವಯ್ಯಾರದಂತೆ!
ಆದರೆ ಈಗ..
ಸೊಂಟ , ಗಾಳಿ ತುಂಬಿ ಉಬ್ಬಿದ ಟ್ಯೂಬಿನಂತೆ !
ಗೆಳೆಯನ ವರ್ಣನೆಗೆ ನಸು ನಕ್ಕು ನುಡಿದೆ
" ನಿನ್ನವಳು ಬದಲಾಗಿಲ್ಲ, ಮೊದಲಿನಿಂದಲೂ ಹಾಗೆ !
ಬದಲಾಗಿದ್ದು, ನಿನ್ನ ದೃಷ್ಟಿ, -ಆಗ ಪ್ರೇಮಕ್ಕೆ ಕಣ್ಣಿಲ್ಲ "
ಹಾಗೆಯೇ ನಿನ್ನನ್ನೊಮ್ಮೆ ನೋಡಿಕೊ.....
ಗೆಳೆಯನ ಜಾಗ ಖಾಲಿಯಾಗಿತ್ತು
ಪ್ರತಿಕ್ರಿಯೆ (8)