1
ತನು ಇದ್ದರೆ ತಾನು
ಅನುವಾದರೆ ಅವನು
ಅರಿತು ಅನುಭವಿಸಿದರೆ
ಇಲ್ಲ ತಾ-ಅವನು ಕಾಣಾ ಪ್ರಭುವೆ
2
ಏನೂ ಅರಿಯದವನು ಸೊನ್ನೆ
ಸೊನ್ನೆ ಅರಿತವನೂ ಸೊನ್ನೆ
ಸೊನ್ನೆಯಿಂದ ಸೊನ್ನೆಗೆ ಹೋಗಿ
ಸೊನ್ನೆಯಾದವನೆ ಅನುಭಾವಿ ಕಾಣಾ ಪ್ರಭುವೆ
3
ನಿದ್ದೆ-ಎಚ್ಚರಗಳ ನಡುವೆ ಅಂಡಲೆಯುತಿದೆ ಜಗವು
ನಿದ್ದೆಯಲಿರುವವಗೆ ಎಚ್ಚರದ ಬಯಕೆಯಿಲ್ಲ
ಎಚ್ಚರವಾದವಗೆ ನಿದ್ದೆ ಬಾರದಂತೆ ಕಾಯಬೇಕು
ಕಾಯವಿರುವವರೆಗೂ ಎಚ್ಚರವೆಂತೋ ಪ್ರಭುವೆ
4
ಕಾಯದ ಕೈಗೆ ಕೊಟ್ಟವನೂ ನೀನೆ
ಕಾಯವ ಬಿಡುವಂತೆ ಮಾಡುವವನೂ ನೀನೆ
ಕಾಯವ ಬಿಡದಂತೆ ಮಾಯೆಯೆ ತಂದವನೂ ನೀನೆ
ಕಾಯ-ಆತ್ಮದ ಸಂಧು ಬಿಡಿಸೋ ಪ್ರಭುವೆ
5
ಅರಸುತ್ತಾ ಅರಸುತ್ತಾ ಅರಸಾಗು
ಅರಸದಿದ್ದರೆ ಆಳಾಗೆಂದು ಭೇದವನಿಟ್ಟು
ಸುಟ್ಟರೆ ವಿಭೂತಿಯಾಗೆಂದೆ ಪ್ರಭುವೆ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!