ಗುರುತಿಸಲಾರೆ ನೀ..
ನಭದಿ ಹಾರುವ ಹಕ್ಕಿಗಳು....ಕ್ರಮಿಸಿದದೂರ.!
ನೀರಿನಲ್ಲಿ ಸಲೀಸಾಗಿ ಈಜುವ
ಮೀನುಗಳ ಗುಂಪಿನ ಹೆಜ್ಜೆಮೂಡದ ಹಾರ !
ವೃಕ್ಷದ ಮೈತುಂಬ ಅಂಟಿರುವ..
ಎಲೆಗಳ ಉಸಿರಾಟದ ಸಾರ.!
ಗುರುತಿಸಲಾರೆಯಾ ಗೆಳೆಯಾ ?
ನಿನ್ನೊಳಗೆ ನಯವಾಗಿ ಜಾರಿ ಬರುವ
ವಿಚಾರಗಳ ಜಾಡು..!
ನವಿರು ನವಿರಾಗಿ ಎದೆಯೊಳಗೆ ಬಂದು
ಕುಳಿತುಕೊಳ್ಳುವ ವಾತ್ಸಲ್ಯದ ಹಾಡು !
ಎದೆಯ ತುಂಬ .... ಬಿಚ್ಚಿಡದೇ ಬಚ್ಚಿಟ್ಟುಕೊಂಡ
ನವಿಲುಗರಿಯಂತಹ ನಾಜೂಕು ಪ್ರೀತಿ !
ಗುರುತಿಸು....ನೀ
ನಿನ್ನೊಳಗೆ..ಅಡಗಿಕುಳಿತಿರುವ
ನೂರಾರು ಅಶ್ವಬಲಗಳ ತಾಕತ್ತು !
ನೀನು.ಈಗ..ಆಕಾಶವನ್ನೇ ಅಲುಗಿಸಿ
ನಕ್ಷತ್ರಗಳನ್ನು ಉದುರಿಸಬಲ್ಲೆ !
ಒಮ್ಮೆ...ಪ್ರಯತ್ನಿಸು.
ಪ್ರತಿಕ್ರಿಯೆ (4)