ಅವಳು
ಬರುವಾಗ ಹೇಳಿ ಬರುವುದಿಲ್ಲ
ಹೋಗುವಾಗ ಹೇಳಿ ಹೋಗುವುದಿಲ್ಲ
ಅವಳೇ ಅವಳೇ ಮಳೆ....

ಅವಳು
ಬಂದಾಗ ಮನ ತಣಿಸದೇ ಹೋಗುವುದಿಲ್ಲ
ಮೈಮನವ ತೋಯಿಸಿ ಹೋಗುವವಳಲ್ಲ
ಅವಳೇ ಅವಳೇ ಮಳೆ...

ಅವಳು
ಸಣ್ಣಗೆ ಬಂದಾಗ ಸೋನೆ ಮಳೆ 
ಜೋರಾಗಿ ಬಂದಾಗ ಕುಂಭದ್ರೋಣ ಮಳೆ
ಅವಳೇ ಅವಳೇ ಮಳೆ..

ಅವಳು
ಇದ್ದರೇನೇ ಪ್ರಕೃತಿ ನಗುತ್ತಾಳೆ
ಒಂದೇ ಎರಡೇ ಹೆಸರು ನಿನಗೆ ಹಸ್ತ,ಚಿತ್ತ,ಸ್ವಾತಿ
ಅವಳೇ ಅವಳೇ ಮಳೆ...