ನೆನಪೇ ನೆನಪೇ
ನೀ ಕಾಡದಿರು ಮತ್ತೆ
ನೆನೆಪೆಂಬ ನೆಪದಲ್ಲಿ
ನೆಪವಾದ ನೆನಪಾದೆ
ನೀ ಕಾಡದಿರು ಮತ್ತೆ ಮತ್ತೆ
ನೆನಪುಗಳೆಂದರೆ ಬರಿ ನೆನಪುಗಳೇ
ನೆನೆದಾಗೆಲ್ಲ ನೆನಪಗುವಾ ನೆಪಗಳೇ
ಇಂದಿನದೆಲ್ಲ ನಾಳೆ ನೆನಪೇ
ನಾಳೆಯು ಇನ್ನೊಂದಿನ ನೆನಪೇ,
ನೀ ಕಾಡದಿರು ಮತ್ತೆ ಮತ್ತೆ
ಮುಪ್ಪಿನಲ್ಲಿ ಯಾವ್ವನದ ಸಿಹಿ ನೆನಪು
ಯಾವ್ವನದಲ್ಲಿ ಬಾಲ್ಯದ ತುಂಟಾಟದ ನೆನಪು
ಮಳೆಯಲ್ಲಿ ಕುರುಂ ಕುರುಂ ತಿಂಡಿಯ ನೆನಪು
ಚಳಿಗೆ ಬೆಚ್ಚಗಿನ ತೊಳ್ತೆಕ್ಕೆಯ ನೆನಪು
ವಸಂತಕ್ಕೆ ಕೋಗಿಲೆಯ ನೆನಪು
ನೀ ಕಾಡದಿರು ಮತ್ತೆ ಮತ್ತೆ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (3)