ಗೆಳತಿ ನೀನಿಲ್ಲದಾಗ ನಿನ್ನ ನೆನಪಾಗಲು

ದೇವರು ಕೊಟ್ಟ ಸುಂದರ ವರ ಕನಸು

ಕ್ಷಣಿಕವಾದರೂ ಅದು ಮಧುರ ಅದು ಸುಂದರ

ನಿನ್ನ ನೆನೆಯುತ್ತಾ ಕಣ್ಣಲ್ಲಿ ನಿನ್ನ ತುಂಬಿಕೊಂಡು

ಕನಸಿನ ಲೋಕದಲಿ ನಿನ್ನ ಕಾಣಲು  

ನಾ ಕಣ್ಮುಚ್ಚಿ ಮಲಗಿದೆ ಗೆಳತಿ

ನನ್ನೆಲ್ಲ ಕನಸುಗಳಲ್ಲೂ ನೀನೆ ನೀನೆ

ಕಲ್ಪನೆಗೂ ಮೀರಿದ ಸುಂದರ ಲೋಕ

ಈ ವರ್ಣಮಯ ಕನಸಿನ ಲೋಕ