ಕಡಲು ಕೊರೆಯುವ ಚಳಿ ಬದುಕಿನ ಸುಳಿವು ನೀಡಿತ್ತು
ಬದುಕ ತಿಳಿಸುವ ಪ್ರಯತ್ನ ಮಾಡಿತ್ತು

ನನ್ನೊಳಗಿನ ನೋವ ಮರೆಯಲು ಕಡಲ ಬಳಿ ಹೋಗಿದ್ದೆ ನಾನು
 ಅಲ್ಲಿ 
 ಕೊರೆಯುವ ಚಳಿ ಮನಸ್ಸಿಗೆ ಮತ್ತಷ್ಟು ಘಾಸಿ ನೀಡಿತ್ತು 
ಅಣಕಿಸಿತ್ತು ಚಳಿಗೆ ಬೆಚ್ಚನೆಯ ಹೊದಿಕೆ ಎಲ್ಲಿ ಎಂದು 
ನೀನು ಏಕಾಂಗಿ ಎಂದು