ಆ ದೇವನು ಅಲ್ಲೆಲ್ಲೋ ಬೆಟ್ಟದ ತುದಿಯಲ್ಲಿ ಅಡಗಿಲ್ಲ.

ಈ ಗುಡಿಯೊಳಗೆ ಬಂದಿಯೂ ಆಗಿಲ್ಲ.

ಕೈಲಾಸ,ವೈಕುಂಠವೆಂಬಲ್ಲಿ ಧ್ಯಾನ ಮಾಡುತ್ತ ಕುಳಿತಿಲ್ಲ.

ಅವನಿರುವನು ಇಲ್ಲೆ ಈ ಕಂದನ ವದನಕಮಲದಲ್ಲಿ,

ನಿದ್ರೆಯಲ್ಲೂ ಮುಗುಳ್ನಗುತ್ತಿರುವ ತುಟಿಗಳಲ್ಲಿ.

ಬೆರಗ ತುಂಬಿಕೊಂಡ ಕೋಮಲ ಬೆರಳುಗಳಲ್ಲಿ,

ಇರುವ ಆ ದೇವ ಪ್ರತಿಮಗುವ ಹೃದಯದಲ್ಲಿ.