ಹುಟ್ಟಿದೊಡನೆ ಶುರುವಾಗುವ ಸಂಬಂಧ
ತಂದೆ ತಾಯಿಯ ಪ್ರೀತಿಯ ಸಂಬಂಧ
ನಂತರದಿ ಅಣ್ಣ, ಅಕ್ಕನ ನಲ್ಮೆಯ ಸಂಬಂಧ
ರಕ್ತ ಹಂಚಿಕೊಂಡು ಹುಟ್ಟಿದ ಸಂಬಂಧಗಳು
ಒಂದೆಡೆಯಾದರೆ ಬಂಧು ಬಾಂಧವರ
ಆತ್ಮೀಯ ಸಂಬಂಧಗಳು ಮತ್ತೊಂದೆಡೆ
ಮದುವೆಯೊಂದಿಗೆ ಶುರುವಾಗುವುದು
ಜೀವನ ಸಂಗಾತಿಯ ಮಧುರ ಸಂಬಂಧ
ಬೆಳೆಯುತ್ತಲೇ ಸಾಗುವುದು ಈ ಸಂಬಂಧಗಳು
ನೋವು ನಲಿವು ಕಷ್ಟ ಸುಖ ಎಲ್ಲವೂ ಉಂಟು ಸಂಬಂಧಗಳಲಿ
ಸ್ನೇಹ ಪ್ರೀತಿ ದ್ವೇಷ ಅಸೂಯೆ ಏನೇ ಇದ್ದರೂ ಈ ಸಂಬಂಧಗಳಲಿ
ಕಡಿದುಕೊಂಡರೂ ಕಡಿಯಲಾರದು ಈ ಸಂಬಂಧಗಳು
ಕಡಿದುಕೊಂಡರೂ ಕಡಿಯಲಾರದು ಈ ಸಂಬಂಧಗಳು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!