ಕರಗದಿರು ಕೊರಗದಿರು
ಮುದುಡದಿರು ಕುಗ್ಗದಿರು
ಯಾಕೀ ಹತಾಶೆ
ಇಲ್ಲದಿರಲಿ ನಿರಾಶೆ
ದುಃಖದ ಮೂಟೆ
ಕಟ್ಟದಿರು ಕೋಟೆ
ಆಗಬೇಕು ಪರಿವರ್ತನೆ
ತಿಳಿನೀ ಬಲುಬೇಗನೆ
ಬೆಂದುಹೋಗದಿರು
ಬಾಳಬೇಗುದಿಯಲಿ
ಕಡಿದಂತೆ ಮತ್ತೆ ಮತ್ತೆ
ಚಿಗುರೊಡೆಯುವ ಹಸಿರ ನೋಡು
ಹಮ್ಮು ಬಿಮ್ಮು ತೊರೆದು
ಒಳಗಣ್ಣು ತೆರೆದು ನೋಡು
ಅದ್ಭುತ ಶಕ್ತಿಯ ಕಿಡಿ ನೀನು
ಕಿಡಿಯೊಂದು ಸಾಕು
ಧರೆಯ ಸುಡಲು
ಬೆಳಕ ನೀಡಲೂ....
ಹನಿಗೂಡಿಸು ಕನಸಬೀಜಕೆ
ಮೊಳಕೆಯೊಡೆದುನೀಡುವದು ಫಲ
ಸಿಗದಿರೆ ಮತ್ತೆ ಮತ್ತೆ ಯತ್ನಿಸು
ಜೇಡ ನೇಯ್ದಂತೆ ಬಲೆಯನು
ತಿಳಿ ನೀ ಜೀವನಕಲೆಯನು....
ರಮ್ಯಬಾಳ ಕುಡಿನೀನು
ಕುಡಿಯೊಂದು ಸಾಕು
ಮರವಾಗಿಬೆಳೆಯಲು
ತಂಪ ನೆರಳು
ಸವಿಹಣ್ಣ ನೀಡಲೂ....
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (2)