ವೃತ್ತಿಯಿಂದ ನಿವೃತ್ತಿಯಾದರು ಅತ್ರಿ
ಅಂದಿನಿಂದ ಅವರ ಜೀಬಿಗೆ ಬಿತ್ತು ಕತ್ರಿ
ದಿನಗಳು ಉರುಳಿದವು, ಎಲ್ಲಿ ನಿಮ್ಮ ಪಿಂಚಣಿ
ಎಂದಳು ರಾಯರ ಐವತ್ತರ ಹೃದಯ ರಾಣಿ
ಅರ್ಜಿ ಸಲ್ಲಿಸಿ ತಿಂಗಳುಗಳಾದರೂ ಸುಮ್ಮನಿತ್ತು ಸರಕಾರೀ treasury
ಉತ್ತರ ಸಿಗದೇ ದಿಕ್ಕು ತೋಚದೆ ರಾಯರಿಗೆ ಆಯಿತು ತುಂಬಾ worry
ಕೆಲಸದ ಕೊನೆಯ ದಿನ ಮಿತ್ರರು ಕೊಡಿಸಿದ ಹೊಸ ಬೂಟು ಜ್ಞಾಪಕಕ್ಕೆ ಬಂತು
ಓಪನ್ ಮಾಡಿದಾಗ ಹೊಚ್ಚ ಹೊಸ ಬೂಟು ಇಣುಕಿ ನನ್ನನು ಧರಿಸು ಅಂತು
ಇನ್ನುಯೇನು ಬಿದ್ದು ಹೋಗುವುದೋ ಅನ್ನುವ ಕಟ್ಟಡದೊಳಗೆ ಪ್ರವೇಶ
ನಿಂತು ನೋಡಲು ಕಣ್ಣಿಗೆ ಕಾಣಿಸಿತು ಸರಕಾರೀ ಕಛೇರಿಯ ರಮಣೀಯ ದೃಶ್ಯ
polish ಹೋಗಿದ್ದ ಹಳೆ ಮೇಜು
ಅದರಮೇಲೆ ಜೀವಜಂತುಗಳ ಮೋಜು
ಹಳೆಯ ಕಡಿತಗಳು ಹೇಳುತಿದ್ದಂತೆ ಇತ್ತು ಅದರ ಗೋಳು
ನನ್ನನು ಯಾರು ನೋಡಲಂತಾಗದೆ ಆವರಿಸಿದೆ ಧೂಳು
ರಾಯರು ನೋಡುತ್ತಿದಂತೆ ಕಡೆತಗಳ ಮಧ್ಯೆ ಕೆರೆಯುತ ಬಂದಿತು ಒಂದು ಕೈಯ್ಯಿ
ಗರಿ ಗರಿ ಗಾಂಧಿ ಹಾಳೆಗಳನ್ನು ಇಟ್ಟರೆ ಎಂಥ ಕೆಲಸಕ್ಕೂ ನಾನು ಸಯ್ಯಿ
ಶಿಸ್ತಿನ ಸಿಪಾಯಿ ಆದ ರಾಯರು ಧಿಕ್ಕರಿಸಿದರು ಆ ಕೈಯನ್ನು
ಪಿಂಚಣಿ ಸಿಗದೇ ವಯಸ್ಸಾಗಿ ಅಲೆಯುತಿದ್ದಾರೆ ಇನ್ನು
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!