ಮಳೆ ಬಂದು ತಂಪಾಗಿಹುದು
ತಂಗಾಳಿ ಸೋಕಿ ಕಂಪು ಸೂಸುತಿಹುದು
ಆದರೂ ಸ್ಪೂರ್ತಿ ಇಲ್ಲ ಕವನಕೆ
ಹೀಗೇಕೆ ಗೆಳತಿ?

ಭಾವನೆಗಳು ತುಂಬಿ ಲಹರಿಯಾಗಿಹುದು
ಹೃದಯ ವೀಣೆ ಮೀಟಿ ಝೇಂಕರಿಸುತಿಹುದು
ಆದರೂ ಭಾವಗಳ ಕೊರತೆ
ಹೀಗೇಕೆ ಗೆಳತಿ?

ಮಲ್ಲಿಗೆಯ ಘ್ರಾಣ ಮೂಸುತಿಹುದು
ಗುಲಾಬಿಯ ಪರಿಮಳ ಪಸರಿಸುತಿಹುದು
ಆದರೂ ಉತ್ಸಾಹದ ಇತಿಮಿತಿ
ಹೀಗೇಕೆ ಗೆಳತಿ?

ಗಿಡ, ಮರಗಳು ಚಿಗರೊಡೆಯುತಿಹುದು
ಹಕ್ಕಿಗಳ ಇಂಚರ ಕೇಳುತಿಹುದು
ಆದರೂ ಪದಗಳ ಚಡಪಡಿಕೆ
ಹೇಗೇಕೆ ಗೆಳತಿ?

ರಾಗ ಲಯ ಸೇರುತಿಹುದು
ಸ್ವರ ಸಂಗೀತ ಗುನುಗುತಿಹುದು
ಆದರೂ ಜೀವಗಾನಕಿಲ್ಲ ಮಿಡಿತ
ಹೇಗೇಕೆ ಗೆಳತಿ?

ಒಲವು ಮನದಲಿ ಬಂಧಿಯಾಗಿಹುದು
ನೆನಪು ನಿನ್ನನೇ ಬಯಸುತಿಹುದು
ನೀನಿಲ್ಲದಿರೆ ದೇಹಕೆ ಉಸಿರೆಲ್ಲಿ
ನೀ ಹೇಳೇ ಗೆಳತಿ
ಪ್ರೀತಿಸುವೆ ಎಂದು
ಮತ್ತೊಂದು, ಮಗದೊಂದು
ಕೊನೆಗೊಂದು ಸರತಿ.........