ಚಿತ್ರಕೃಪೆ: ಅಂತರ್ಜಾಲ
ಭಾವಸಾಗರದಿ ಕವಿತೆಗೆ ಗಾಳವಿಟ್ಟು ಕುಳಿತಿದ್ದೀನಿ
ಬೀಳಬಹುದೆಂದು ಸುಂದರ ಕವಿತೆ
ಗಾಳಕ್ಕೆ ಸಿಕ್ಕಿಸಿದೇನೆ ಏಕಾಂತವೆಂಬ ಹುಳು
ಕೆಲವು ಕವಿತೆಗಳು ಮೇಲೆ ಬಂದು ಅಲೆಯೆಬ್ಬಿಸಿ ಮತ್ತೆ ಮುಳುಗಿವೆ
ಸಿಗಬಹುದೆಂಬ ಕವಿತೆಯ ಆಸೆಯ ಜೀವಂತವಾಗಿರಿಸಿ ಹೋಗುತಿವೆ
ಕವಿತೆ ಸುಲಭಕ್ಕೆ ಸಿಗುವುದಿಲ್ಲ.
ಕವಿತೆಯ ಬೇಟೆಗೆ ಬೇಕು ಅಪಾರ ತಾಳ್ಮೆ
ಗಾಳದ ಅಲುಗಾಟಕ್ಕೆ ಕವಿತೆ ಸಿಗಬಹುದೇನೋ ಎಂಬ ಭಾವ
ಮತ್ತೆ ಚಲನೆ ಇರದಿರೇ ಮತ್ತದೇ ನಿರಾಸೆ
ಸಣ್ಣ ಸಣ್ಣ ಕವಿತೆಗಳು ಗಾಳಕ್ಕೆ ಬೀಳುವುದುಂಟು,
ಅವುಗಳನ್ನೆಲ್ಲಾ ಹೆಕ್ಕಿ ಮತ್ತೆ ಗಾಳಕ್ಕೆ ಸಿಕ್ಕಿಸುತ್ತೇನೆ,
ದೊಡ್ಡಕವಿತೆಯ ಬೇಟೆಗೆ.
ಕವಿತೆ ಸಿಕ್ಕದಿರೇ ಬೇಸರವಿಲ್ಲ,
ಆವರೆಗಿನ ಕಲ್ಪನೆಯ ಕವಿತೆ ನೈಜ್ಯಕವಿತೆಗಿಂತಲೂ ದೊಡ್ಡದಿದೆ.
ಸಧ್ಯಕ್ಕೆ ನನಗಷ್ಟು ಸಾಕು.
ಪ್ರತಿಕ್ರಿಯೆ (1)