ಮೊದಲು ನಾನು ಹೀಗಿರಲಿಲ್ಲ.
ಪ್ರೇಮಗೀತೆಗಳು ಅಷ್ಟಾಗಿ ಹಿಡಿಸುತ್ತಿರಲಿಲ್ಲ.
ಹುಡುಗಿಯರ ನೋಟ ಅಷ್ಟಾಗಿ ಕಾಡುತ್ತಿರಲಿಲ್ಲ.
ನನಗೊಂದು ಹೃದಯಲಿದೆಯೆಂದು ತಿಳಿದಿದ್ದರೂ,
ಅದು ಮಿಡಿಯುತ್ತಿರುವುದರ ಬಗ್ಗೆ ಅನುಮಾನವಿತ್ತು.

ಹೀಗಿರುವಾಗಲೇ ಆಕೆ ಪರಿಚಯವಾಗಿದ್ದು.
ಅವಳೇನು ಅಂಥ ಸುಂದರಿಯಲ್ಲ.
ಅವಳ ಮಾತು ಮಾತ್ರ ಜೇನಿನಲ್ಲಿ ಅದ್ದಿತೆಗೆದಂತೇ,
ಬೆಣ್ಣೆಯಲ್ಲಿ ಕೂದಲು ತೆಗೆದಂತೆ,
ಕೇಳಲು ಎಂಥದೋ ಖುಷಿ,

ಅವಳು ಮಗುವಿನಂಥವಳು,
ಮನೆಯ ಎದುರ ಗುಲಾಬಿ ಗಿಡದಲ್ಲಿಹೂ ಅರಳಿದ್ದನ್ನು ಕೂಡ ಅಚ್ಚರಿಯಿಂದ ಬಂದು ಹೇಳುತ್ತಿದ್ದಳು.

ಕುಡುಕ ಅಪ್ಪನ ಬಗ್ಗೆಯು ಅಷ್ಟೆ ಬೇಸರದಿಂದ ಹೇಳುತ್ತಿದ್ದಳು.

ಅವಳ ಸಾನಿಧ್ಯದಿಂದಲ್ಲೋ ಏನೋ ಪ್ರೇಮಗೀತೆಗಳೆಲ್ಲ ಅರ್ಥವಾಗತೊಡಗಿದ್ದವು.ಅಥವಾ ಇಷ್ಟವಾಗತೊಡಗಿದವು.

ಕಾಡು,ಬೆಟ್ಟ,ನದಿ,ಬಯಲೆಂದು ಕವಿತೆ ಗೀಚಿ ಸುಮ್ಮನಾಗುತ್ತಿದ್ದವನು ಪ್ರೇಮಗೀತೆ ಬರೆಯಲು ಮನಸ್ಸು ಮಾಡಿದೆ.

ಅವಳು ಬರುವುದು ತಡವಾದರೇ ಎಂಥದೋ ಚಡಪಡಿಕೆ.
ಅವಳ ಮೊಬೈಲ್ ಸಂದೇಶಕ್ಕೆ ಮೈಮನಕ್ಕೆ ಎಂಥದೋ ಪುಳಕ.

ಹೌದು ನನಲ್ಲೇನೋ ಬದಲಾಗಿದೆ.ನನ್ನ ಹೃದಯವು ಮಿಡಿಯುತ್ತದೆಂಬುದು ಈಗ ಖಾತ್ರಿಯಾಗಿದೆ.