ಕೇಳುವೆಯ ಗೆಳತಿ ನನ್ನೆದೆಯ ಹಾಡನ್ನು

ಪ್ರೀತಿಯೆಂಬ ಲೇಖನಿಗೆ ಪ್ರೇಮದ ಶಾಯಿಯನ್ನುತುಂಬಿ

ತನ್ಮಯನಾಗಿ ಬರೆದಿರುವ ಈ ಹಾಡನ್ನು...

 

ನೀ ತೋರಿದ ಬೆಲೆ ಕಟ್ಟಲಾಗದ ಪ್ರೀತಿಗೆ

ಪರವಶನಾಗಿ ಮನಸೋತು ಬರೆದಿರುವ

ಈ ಪ್ರೇಮಗೀತೆಯ ಕೇಳುವೆಯ ಗೆಳತಿ...

 

ಸವಿ ಸವಿ ಮಾತುಗಳೇ ಬರದ ನನಗೆ

ನಿನ್ನ ಪ್ರೀತಿ ಕಲಿಸಿಕೊಟ್ಟ ಮುತ್ತಿನಂಥ ಪದಗಳ ಜೋಡಿಸಿ

ಬರೆದಿರುವ ಹಾಡನ್ನು ಕೇಳುವೆಯ ಗೆಳತಿ...

 

ನೀ ನೀಡುತ್ತಿರುವ ನಿಸ್ವಾರ್ಥ ಪ್ರೀತಿಗೆ

ಕಾಣಿಕೆಯಾಗಿ ನೀಡುತ್ತಿರುವ ಈ ಹಾಡನ್ನು

ಒಮ್ಮೆಯಾದರೂ ಕೇಳುವೆಯ ಗೆಳತಿ....