ಸಿಟ್ಯಾಕೆ ಸಿಡುಕ್ಯಾಕೆ ನನ ಮ್ಯಾಲೆ
ನೀ ಮೌನವಾದರೆ ನನ್ನ ಮಾತುಗಳಿಗೇನು ಬ
ಚಂದಾದ ಆ ಮುಖದಲ್ಲಿ ಕೋಪದ ಗೆರೆಯೇಕೆ
ಹುಣ್ಣಿಮೆಯ ಚಂದ್ರನಲಿ ಕಪ್ಪನೆ ಕಲೆ
ಅರಳು ಹುರಿದಂತೆ ಪಟಪಟನೆ ಮಾತನಾಡುವ ನೀನು
ಮೌನವ ತಾಳಿದರೆ ನಾನೆಂಥ ಮಾಡುವುದು
ನಿನ್ನ ಮಾತುಗಳು ಕೇಳದಿದ್ದ ಮೇಲೆ
ನಾನೇನ ಮಾಡಲಿ ಈ ಕಿವಿಗಳಿಟ್ಟುಕೊಂಡು ..
ನಿನ್ನ ಮೌನಕೆ ಕಾರಣವಾದರು ಏನೆಂದು
ಕೇಳಿದರೂ ಹೇಳಲು ಬಾಯ್ತೆರೆಯಬೇಕೆಂದು
ಮೌನವ ವಹಿಸಿರುವೆಯಲ್ಲ ಗೆಳತಿ
ನಿನಗಿದು ಸರಿಯೇ ಒಮ್ಮೆ ಯೋಚಿಸಿ ನೋಡು
ಪ್ರತಿಕ್ರಿಯೆ (2)